ಮಂಡ್ಯ: ಅಂಬೇಡ್ಕರ್ ಭವನ ನಾಮಫಲಕದ ಕೆಲವು ಅಕ್ಷರ ನಾಪತ್ತೆ
Update: 2018-07-28 20:52 IST
ಮಂಡ್ಯ, ಜು.28: ಇಲ್ಲಿನ ಸುಭಾಷ್‍ನಗರದಲ್ಲಿ ಜಿಲ್ಲಾಡಳಿತ ನಿರ್ಮಾಣ ಮಾಡಿರುವ ನೂತನ ಡಾ. ಬಿ.ಆರ್.ಅಂಬೇಡ್ಕರ್ ಭವನದ ನಾಮಫಲಕದಲ್ಲಿ ಅಕ್ಷರಗಳು ಕಣ್ಮರೆಯಾಗಿದ್ದು, ಅಂಬೇಡ್ಕರ್ ಹೆಸರನ್ನು ಅಣಕಿಸುವಂತಿದೆ.
ಕಾಮಗಾರಿ ಅಪೂರ್ಣಗೊಂಡಿದ್ದರೂ ವಿಧಾನಸಭಾ ಚುನಾವಣೆಗೂ ಮುನ್ನ ತರಾತುರಿಯಲ್ಲಿ ಭವನವನ್ನು ಲೋಕಾರ್ಪಣೆ ಮಾಡಲಾಗಿತ್ತು. ಭವನದ ಪ್ರವೇಶದ್ವಾರದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭವನ ಎಂದು ನಾಮಫಲಕ ಹಾಕಲಾಗಿತ್ತು. ಆದರೆ, ಇದೀಗ ಫಲಕದಲ್ಲಿ ಕೆಲವು ಅಕ್ಷರ ನಾಪತ್ತೆಯಾಗಿವೆ. ಫಲಕದಲ್ಲಿ ವ್ಯತ್ಯಾಸವಾಗಿ ಹಲವು ದಿನವಾಗಿದ್ದರೂ ಬದಲಾಯಿಸಿಲ್ಲ. ಪೂರ್ಣ ಹಂತದ ಕಾಮಗಾರಿ ಪ್ರಗತಿಯಲ್ಲಿರುವ ಸಂದರ್ಭದಲ್ಲಿ ಸಾರ್ವಜನಿಕರು ಫಲಕ ನೋಡಿ ಬೇಸರಗೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ನಾಮಫಲಕ ಸರಿಪಡಿಸಿ ಅಂಬೇಡ್ಕರ್ ರವರಿಗೆ ಗೌರವ ನೀಡಲು ಮುಂದಾಗಬೇಕಿದೆ ಎಂಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ.