ಪ್ರತ್ಯೇಕ ರಾಜ್ಯದ ಕೂಗು ಬಿಜೆಪಿಯ ರಾಜಕೀಯ ಗಿಮಿಕ್: ಪರಿಷತ್ ಸದಸ್ಯ ಭೋಜೇಗೌಡ

Update: 2018-07-29 13:02 GMT

ಚಿಕ್ಕಮಗಳೂರು, ಜು.29: ಪ್ರತ್ಯೇಕ ಉತ್ತಕ ಕರ್ನಾಟಕ ರಾಜ್ಯದ ಕೂಗು ಬಿಜೆಪಿಯ ರಾಜಕೀಯ ಗಿಮಿಕ್ ಎಂದು ವಿಧಾನ ಪರಿಷತ್ ಸದಸ್ಯ ಎಸ್‍ಎಲ್. ಭೋಜೇಗೌಡ ತೀರುಗೇಟು ನೀಡಿದ್ದಾರೆ.

ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವನ್ನು ಎರಡು ಭಾಗ ಮಾಡಬೇಕೆಂದು ಯಾರೂ ಬಯಸಿಲ್ಲ. ಪ್ರತ್ಯೇಕ ರಾಜ್ಯದ ಕೂಗನ್ನು ರಾಜಕೀಯ ದಾಳವಾಗಿ ಮಾಡಿಕೊಳ್ಳುವ ಪ್ರಯತ್ನ ಬಿಜೆಪಿಯವರು ಮಾಡುತ್ತಿದ್ದಾರೆಂದು ಆರೋಪಿಸಿದ ಅವರು, ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಹೋರಾಟ ಮಾಡುತ್ತೇವೆಂದು ಶಾಸಕ ಶ್ರೀರಾಮುಲು ಇತ್ತೀಚೆಗೆ ಹೇಳಿದ್ದರು. ನಂತರ ಏನಾಯ್ತು ಎಂದು ಪ್ರಶ್ನಿಸಿದ ಅವರು, ಹೀಗೆ ಮಾಡಿ ಸಮಧಾನ ಮಾಡುವ ನಾಟಕ ಮಕ್ಕಳ ಆಟವಲ್ಲ. ಪ್ರತ್ಯೇಕ ರಾಜ್ಯದ ಮಾತನ್ನು ನಾವು ಹೇಳಿಲ್ಲ. ಅದಕ್ಕೆ ಮುಖ್ಯಮಂತ್ರಿಯವರನ್ನು ಏಕೆ ಹೊಣೆಗಾರರನ್ನಾಗಿಸಬೇಕೆಂದು ಆಕ್ರೋಶ ವ್ಯಕ್ತ ಪಡಸಿದರು.

ಬಹುಮತದಿಂದ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರೆ ರೈತರ ಸಂಪೂರ್ಣ ಸಾಲಮನ್ನಾ ಮಾಡಲು ಅನುಕೂಲ ಆಗುತ್ತಿತ್ತು ಎನ್ನುವ ದಾಟಿಯಲ್ಲಿ ಮುಖ್ಯಮಂತ್ರಿ ಹೇಳಿದ್ದಾರೆ. ಇದನ್ನು ಮೊದಲೇ ಹೇಳಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಮುಂದಾಗುತ್ತಿದ್ದಾರೆ, ಇದು ಜಾಸ್ತಿ ದಿನ ನಡೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮನಗರದಿಂದ ಪಾದಯಾತ್ರೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ ಅವರು, ಮಹಿಳೆಯೊಬ್ಬರು ಸಾಲಮನ್ನಾದ ಬಗ್ಗೆ ಮಾತನಾಡಿದ್ದಾರೆ. ಆ ಮಹಿಳೆ ಸಾಲವನ್ನೇ ಮಾಡಿಲ್ಲ. ಆಕೆಯ ಹೆಸರಿನಲ್ಲಿ ಜಮೀನು ಕೂಡ ಇಲ್ಲ ಎಂದ ಅವರು, ಮುಖ್ಯಮಂತ್ರಿ ಪೂರ್ಣ ಪ್ರಮಾಣದ ಸಾಲಮನ್ನಾ ಮಾಡುವಂತೆ ಬಿಜೆಪಿಯವರು ಮಹಿಳೆಯ ಹತ್ತಿರ ಹೇಳಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಮತ್ತು ಸಾಲಮನ್ನಾ ರಾಜಕೀಯವಾಗಿ ಉಪಯೋಗಿಸಿಕೊಂಡು ರಾಜಕೀಯ ಮಾಡುವ ಬಿಜೆಪಿಯವರನ್ನು ರಾಜಕೀಯವಾಗಿಯೇ ಎದುರಿಸುತ್ತೇವೆಂದು ತೀರುಗೇಟು ನೀಡಿದರು.

ಆಗಸ್ಟ್ 9 ರಿಂದ ಬಿಜೆಪಿ ಮೂರು ತಂಡಗಳಾಗಿ ಪ್ರತಿಭಟನೆ ಮುಂದಾಗಿರುವುದಕ್ಕೆ ಪ್ರತಿಕ್ರಿಯಿಸಿದ ಎಸ್.ಎಲ್.ಭೋಜೇಗೌಡ, ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿಯವರು ಪ್ರತಿಭಟನೆ ಮುಂದಾಗಿದ್ದಾರೆಯೇ ಹೊರತು, ರೈತರ ಸಾಲಮನ್ನಾ ಮಾಡಿ ಎಂದಲ್ಲ. 42 ಸಾವಿರ ಕೋಟಿ ರೂ. ರೈತರ ಸಾಲದಲ್ಲಿ ಸಹಕಾರಿ ಸಂಘದಲ್ಲಿದ್ದ 12 ಸಾವಿರ ಕೋಟಿ ರೂ. ರೈತರ ಸಾಲವಿತ್ತು. ಸಿ.ಎಂ. ಕುಮಾರಸ್ವಾಮಿಯವರು 14ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ಇದು ಸಹಕಾರಿ ಸಂಘದ ಸಂಪೂರ್ಣ ಸಾಲಮನ್ನಾವಲ್ಲವೇ ಎಂದು ಪ್ರಶ್ನಿಸಿದ ಅವರು, ಸಾಲ ಮಾಡಿದವರ್ಯಾರೂ ಮಾತನಾಡುತ್ತಿಲ್ಲ. ಸಾಲಮಾಡದವರು ಜನರನ್ನು ಹಾದಿ ತಪ್ಪಿಸಲು ಇಂತಹ ಕುತಂತ್ರ ಮಾಡುತ್ತಿದ್ದಾರೆ. ಕುಮಾರಸ್ವಾಮಿಯವರು 45ಸಾವಿರ ಕೋಟಿ ರೂ. ಸಾಲಮನ್ನಾ ವಿಚಾರವನ್ನು ಮುಚ್ಚಿಹಾಕಿ ಓಟ್‍ಬ್ಯಾಂಕ್ ಮಾಡಲು ಹುನ್ನಾರ ಬಿಜೆಪಿಯವರು ನಡೆಸುತ್ತಿದ್ದಾರೆ ಎಂದು ಆರೋಪಿಸಿದರುಶ್ರಾವಣ ಮಾಸದಲ್ಲಿ ನಿಗಮ ಮಂಡಳಿ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತಿದೆ. ಜಿಲ್ಲೆಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗುವ ಆಕಾಂಕ್ಷೆ ಇದೆ. ಇತ್ತೀಚೆಗೆ ಸುರಿದ ಬಾರಿ ಮಳೆಗೆ ಉಂಟಾಗಿರುವ ಹಾನಿಯ ವರದಿ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪರಿಹಾರ ಜಿಲ್ಲೆಗೆ ತರಲಾಗುವುದು ಎಂದರು.

ಕರಗಡ ಚಾನಲ್‍ನಲ್ಲಿ ಮಣ್ಣು ಕುಸಿಯುವ ಬಗ್ಗೆ ಇಂಜಿನಿಯರ್‍ಗಳಿಗೆ ತಿಳಿದಿರಲ್ಲಿವೇ ಎಂದು ಪ್ರಶ್ನಿಸಿದ ಭೋಜೇಗೌಡ, ಕಾಂಟ್ರಾಕ್ಟರ್ ಮತ್ತು ಇಂಜಿನಿಯರ್‍ಗಳ ವೈಫಲ್ಯದಿಂದ ಚಾನಲ್‍ನಲ್ಲಿ ಮಣ್ಣು ಕುಸಿದಿದೆ. ಈ ಬಾರಿಯ ಮಳೆಗೆ ಬಯಲು ಸೀಮೆ ಭಾಗದ ಅನೇಕ ಕೆರೆಗಳು ಇಷ್ಟುಹೊತ್ತಿಗೆ ತುಂಬಿರುತ್ತಿದ್ದವು. ಆ ಭಾಗದ ರೈತರಿಗೆ ಅನ್ಯಾಯವಾಗಿದೆ. ಕರಗಡ ಯೋಜನೆಗೆ ಹಣ ತಂದು ಯೋಜನೆ ಪೂರ್ಣಗೊಳಿಸಲು ಸರಕಾರ ಬದ್ಧವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News