ಹನೂರು: ವಿಶ್ವ ಹುಲಿ ಸಂರಕ್ಷಣಾ ದಿನಾಚರಣೆ
ಹನೂರು,ಜು.29: ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಮಾಡುವುದು ಕೇವಲ ಅಧಿಕಾರಿಗಳಿಗೆ ಮಾತ್ರವಲ್ಲ, ದೇಶದ ಸಮಸ್ತ ನಾಗರೀಕರ ಕರ್ತವ್ಯವಾಗಿದೆ ಎಂದು ಆರ್‍ಎಫ್‍ಒ ಕೆ. ಶಿವರಾಮ್ ಹೇಳಿದರು.
ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ಬೈಲೂರು ಮಹದೇಶ್ವರ ಫ್ರೌಡ ಶಾಲೆಯಲ್ಲಿ ಬೈಲೂರು ವನ್ಯಜೀವಿ ವಲಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಹುಲಿ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ಗಿಡ ಬೆಳೆಸುವ ಮೂಲಕ ಅರಣ್ಯ ಮತ್ತು ಪರಿಸರ ಬಗ್ಗೆ ಕಾಳಜಿ ವಹಿಸಬೇಕು. ಕಾಡು ಸಮೃದ್ದಿಯಾಗಿದ್ದರೆ ಮಳೆ ಬೆಳೆ ಉತ್ತಮವಾಗಿರುತ್ತದೆ. ಹಾಗೆಯೇ ಹುಲಿ ಸೇರಿದಂತೆ ಪ್ರಾಣಿ ಸಂಕುಲವು ಕೂಡ ಕಾಡಿನ ಸಂಪತ್ತನ್ನು ಹೆಚ್ಚಿಸುತ್ತದೆ. ನಮ್ಮಂತೆ ಹುಲಿಯೂ ಸಹ ಒಂದು ಜೀವಿಯಾಗಿದೆ. ದೇಶದಲ್ಲಿ 3891 ಹುಲಿಗಳಿದ್ದು, ಕರ್ನಾಟಕದಲ್ಲಿ 408 ಹುಲಿಗಳಿದೆ. ಅದರಲ್ಲಿ ಸರ್ವೇ ಪ್ರಕಾರ ಚಾ.ನಗರ ಜಿಲ್ಲೆಯಲ್ಲಿ 38 ರಿಂದ 40 ಹುಲಿಗಳಿರುವುದು ಖುಷಿಪಡುವ ವಿಷಯ ಎಂದರು.
ಈ ಸಂದರ್ಭದಲ್ಲಿ ಹುತ್ತೂರು ಗ್ರಾ.ಪಂ. ಅಧ್ಯಕ್ಷ ಬಸವಣ್ಣ, ಸಹಾಯಕ ವಲಯ ಅರಣ್ಯ ಅಧಿಕಾರಿ ಮಹೇಶ್, ರವಿ, ಪಿ.ಜಿ.ಪಾಳ್ಯ ಗ್ರಾ.ಪಂ. ಸದಸ್ಯ ಎನ್.ಕೃಷ್ಣಮೂರ್ತಿ, ಮುಖ್ಯ ಶಿಕ್ಷಕ ಎಸ್.ರಾಜೇಂದ್ರ, ಶಿಕ್ಷಕಿ ಸುಗುಣ, ದ್ರಾಕ್ಷಾಯಿಣಿ, ರಾಜು, ಅಯ್ಯುನಾಯರ್, ಎಸ್‍ಡಿಎಂಸಿ ಕಾರ್ಯದರ್ಶಿ ಬಸವಣ್ಣ, ಗಾರ್ಡ್‍ಗಳಾದ ಲೋಕೇಶ್, ಚಿದಾನಂದ್, ಹಿರಿಮಠ್, ವಿಶ್ವೇಶ್ವರಯ್ಯ, ವಿಶ್ವ, ರಂಗಸ್ವಾಮಿ, ಮಾದಪ್ಪ ಹಾಗೂ ಮುಖಂಡ ಚೆಲುವರಾಜು ಹಾಗೂ ವಿದ್ಯಾರ್ಥಿಗಳು ಇದ್ದರು.