ಹನೂರು: ಜಮೀನಿಗೆ ಆನೆ ದಾಳಿ; ಅಗತ್ಯ ಕ್ರಮ ಕೈಗೊಳ್ಳಲು ಆಗ್ರಹ
ಹನೂರು,ಜು.29: ಪಟ್ಟಣದ ಮಲೈಮಹದೇಶ್ವರ ಬೆಟ್ಟದ ಮುಖ್ಯರಸ್ತೆಯ ಡಿಆರ್ ಹಾರ್ಡವೇರ್ ಹಿಂಭಾಗದಲ್ಲಿರುವ ಜಮೀನುಗಳಿಗೆ ಪ್ರತಿ ದಿನ ರಾತ್ರಿ ಆನೆಗಳು ದಾಳಿ ಮಾಡುತ್ತಿದ್ದು, ಕೈಗೆ ಬಂದ ಬೆಳೆಯನ್ನು ಕಳೆದುಕೊಳ್ಳಬೇಕಾದ ಭೀತಿ ಎದುರಾಗಿದೆ ಎಂದು ರೈತರು ತಮ್ಮ ಆಳಲು ತೋಡಿಕೂಂಡಿದ್ದು, ಈ ಕೂಡಲೇ ಅರಣ್ಯ ಇಲಾಖಾಧಿಕಾರಿಗಳು ಎಚ್ಚೆತ್ತು ಅಗತ್ಯ ಕ್ರಮ ಕೈಗೊಳ್ಳವಂತೆ ರೈತ ಮುಖಂಡರು ಆಗ್ರಹಿಸಿದ್ದಾರೆ.
ಪಟ್ಟಣದ ಹೊರವಲಯದಲ್ಲಿರುವ ಜಮೀನಿಗಳಿಗೆ ಪ್ರತಿದಿನ ರಾತ್ರಿ ಆನೆಗಳ ದಂಡು ಲಗ್ಗೆ ಇಡುತ್ತಿದ್ದು, ಕಳೆದ ವರ್ಷ ಕೂಡಾ ಕಾಡಾನೆಗಳ ದಾಳಿಗೆ ಈ ಭಾಗದ ರೈತರು ಬೆಳದಿದ್ದ ಕಬ್ಬು, ಜೋಳ ಇನ್ನಿತರ ಫಸಲನ್ನು ತಿಂದು ತುಂಬಾ ನಷ್ಟವನ್ನು ಉಂಟುಮಾಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮತ್ತೆ ಆನೆಗಳು ಲಗ್ಗೆ ಇಟ್ಟಿರುವುದರಿಂದ ಈ ಭಾಗದ ರೈತರು ತುಂಬಾ ಆತಂಕಕ್ಕೆ ಒಳಗಾಗಬೇಕಾಗಿದೆ ಮತ್ತು ಪಟ್ಟಣದ ಸಮೀಪದಲ್ಲೇ ಈ ಜಮೀನುಗಳಿಗೆ ಆನೆಗಳು ಬರುವುದರಿಂದ ರಾತ್ರಿ ಸಮಯದಲ್ಲಿ ಇಲ್ಲಿನ ಸಾರ್ವಜನಿಕರು ಭಯದ ನಡುವೆಯೇ ಓಡಾಟ ನಡೆಸಬೇಕಾಗಿದೆ. ಆದ್ದರಿಂದ ಅರಣ್ಯ ಇಲಾಖಾಧಿಕಾರಿಗಳು ಈ ಕೂಡಲೇ ರೈತರ ನೆರವಿಗೆ ನಿಲ್ಲಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.