ಸಂಸದ ಪ್ರತಾಪ್ ಸಿಂಹ ರಾಜಕೀಯ ಹಾದರಕ್ಕೆ ಹುಟ್ಟಿರುವ ಆಕಸ್ಮಿಕ ಶಿಶು: ಪ್ರೊ.ಮಹೇಶ್ ಚಂದ್ರಗುರು

Update: 2018-07-30 14:58 GMT

ಮೈಸೂರು,ಜು.30: ಸಂಸದ ಪ್ರತಾಪ್ ಸಿಂಹ ಒಬ್ಬ ಸಿಂಗಳೀಕ, ರಾಜಕೀಯ ಹಾದರಕ್ಕೆ ಹುಟ್ಟಿರುವ ಆಕಸ್ಮಿಕ ಶಿಶು ಎಂದು ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಟೀಕಾಪ್ರಹಾರ ನಡೆಸಿದರು.

ಮಾನಸಗಂಗೋತ್ರಿಯ ರಾಣಿಬಹದ್ದೂರು ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ದಿ.ರಾಕೇಶ್ ಸಿದ್ದರಾಮಯ್ಯರವರ ಎರಡನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ 'ಸಾಮಾಜಿಕ ನ್ಯಾಯದ ಸೋಲು-ಗೆಲುವುಗಳು' ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಲಿತರ ಗರಡಿಯಲ್ಲಿ ಬೆಳದು ಆರೆಸ್ಸೆಸ್ ಗರಡಿಯಲ್ಲಿ ಅಧಿಕಾರ ಅನುಭವಿಸುತ್ತಿರುವ ಈತ ದಲಿತರ ವಿರುದ್ಧ ತೊಡೆತಟ್ಟುತ್ತಿದ್ದಾನೆ. ಈತ ಆಕಸ್ಮಿಕವಾಗಿ ಗೆದ್ದುಬಿಟ್ಟ. ಬಿಜೆಪಿ ಓಟಿನಿಂದ ಗೆದ್ದಿದ್ದಲ್ಲ, ಜಾತಿ ಓಟಿನಿಂದ ಗೆದ್ದಿರುವುದು. ಇವನ್ನೊಬ್ಬ ರಾಜಕೀಯ ಹಾದರದ ಆಕಸ್ಮಿಕ ಶಿಶು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಸಾಧನೆಯ ಪುಸ್ತಕವನ್ನು ಈತ ನೀಡುತ್ತಿದ್ದಾನೆ. ದಲಿತ ಯುವಕನೊಬ್ಬ ಮೀಸೆ ಬಿಟ್ಟ ಎಂಬ ಕಾರಣಕ್ಕೆ ಹತ್ಯೆ ಮಾಡುವುದು, ಸತ್ತ ದನದ ಚರ್ಮವನ್ನು ಮಾರಾಟ ಮಾಡಿದರು ಎಂದು ನಾಲ್ವರು ಯುವಕರನ್ನು ವೈದಿಕರು ಹೊಡೆದು ಸಾಯಿಸುವುದು, ಹಾಡುಹಗಲೇ ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುವುದು, ಕೈಗೆ ವಾಚ್ ಕಟ್ಟಿದ ಎಂದು ಕೈ ಕತ್ತರಿಸುವುದು, ಮುಸಲ್ಮಾನರನ್ನು ಗುಂಡಿಕ್ಕಿ ಸಾಯಿಸುವುದು ಮೋದಿ ಸಾಧನೆಯೇ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News