ಮೈಸೂರು: ಸಾವಿನಲ್ಲೂ ಒಂದಾದ ತಾಯಿ ಮಗ
Update: 2018-07-30 20:51 IST
ಮೈಸೂರು,ಜು.30: ಸಾವಿನಲ್ಲೂ ತಾಯಿ ಮಗ ಇಬ್ಬರೂ ಒಂದಾದ ಘಟನೆ ಮೈಸೂರಿನ ಅಗ್ರಹಾರದಲ್ಲಿ ನಡೆದಿದೆ.
ಅಗ್ರಹಾರದ ನಿವಾಸಿ ಶಾಂತಮ್ಮಣ್ಣಿ (72) ಅವರ ಮಗ ದಿಲೀಪ್ (49) ಅನಾರೋಗ್ಯದಿಂದ ಬಳಲುತ್ತಿದ್ದರು. ತಾಯಿಗೆ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಿದ್ದರೆ, ಮಗನಿಗೆ ಹೃದಯ ಸಂಬಂಧಿ ಸಮಸ್ಯೆಯಿತ್ತು. ಸೋಮವಾರ ಬೆಳಿಗ್ಗೆ 6 ಗಂಟೆಗೆ ಮಗ ಮೃತಪಟ್ಟಿದ್ದು, ಮಗನ ಸಾವಿನ ಸುದ್ಧಿ ಕೇಳಿದ ಬಳಿಕ ತಾಯಿಯೂ ಸಾವನ್ನಪ್ಪಿದ್ದಾರೆ.
ಇಬ್ಬರ ಅಂತ್ಯಕ್ರಿಯೆಯನ್ನು ವಿದ್ಯಾರಣ್ಯಪುರಂನ ರುದ್ರಭೂಮಿಯಲ್ಲಿ ಒಟ್ಟಿಗೆ ನೆರವೇರಿಸಲಾಯಿತು.