ಹನೂರು: ಕಾಡು ಪ್ರಾಣಿ ಬೇಟೆಗಾರರ ಬಂಧನ
Update: 2018-07-30 22:28 IST
ಹನೂರು,ಜು.30: ಕಾಡು ಪ್ರಾಣಿಗಳನ್ನು ಬೇಟೆಯಾಡಲು ಯತ್ನಿಸಿದ ಹನೂರು ತಾಲೂಕಿನ ಮಲೈಮಹದೇಶ್ವರ ಬೆಟ್ಟದ ವನ್ಯಜೀವಿ ವಿಭಾಗದ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ಅಣೆಹೊಲ ಗ್ರಾಮದ ಗುಂಡ ಹಾಗೂ ದುಂಡ ಬಂಧಿತ ಆರೋಪಿಗಳು. ಮಲೈಮಹದೇಶ್ವರ ವನ್ಯಜೀವಿ ವಿಭಾಗ ಎದಿರುಬೋಳಿ ವಲಯದ ಕೀವುಡಾದ್ರಿ ಹಣೆ ಅರಣ್ಯದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಹೊಂಚು ಹಾಕುತ್ತಿದ್ದ ಬೇಟೆಗಾರರನ್ನು ಬಂಧಿಸಿದ ಪ್ರಶಾಂತ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಗುರುರಾಜ್, ವಲಯ ಸಂರಕ್ಷಣಾಧಿಕಾರಿ ಶ್ರೀದರ್ ಮೂರ್ತಿ, ಉಪವಲಯ ಅರಣ್ಯಾಧಿಕಾರಿ ಮ.ಮ ಬೆಟ್ಟ ಮತ್ತು ಸಿಬ್ಬಂದಿ ಬಂಧಿತರಿಂದ ಉರುಳು , ಮಚ್ಚು ಮತ್ತು ತಂತಿಯನ್ನು ವಶ ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.