ಮೈಸೂರು: ವಕೀಲರ ಹತ್ಯೆ ಖಂಡಿಸಿ ಪ್ರತಿಭಟನೆ
Update: 2018-07-30 23:02 IST
ಮೈಸೂರು,ಜು.30: ದಾಂಡೇಲಿಯಲ್ಲಿ ನಡೆದ ವಕೀಲರ ಹತ್ಯೆ ಖಂಡಿಸಿ ಮೈಸೂರು ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರು ನ್ಯಾಯಾಲಯದ ಎದುರು ಸೋಮವಾರ ಕೆಲಹೊತ್ತು ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ವಕೀಲರು, ವಕೀಲರ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿವೆ. ಇದನ್ನು ನಾವು ಖಂಡಿಸುತ್ತೇವೆ. ದಾಂಡೇಲಿಯಲ್ಲಿ ವಕೀಲರೋರ್ವರ ಹತ್ಯೆಯಾಗಿದೆ. ವಕೀಲರ ಮೇಲೆ ನಡೆಯುವ ದೌರ್ಜನ್ಯಗಳು ನಿಲ್ಲಬೇಕು. ವಕೀಲರ ಹತ್ಯೆ ನಡೆಸಿದ ವ್ಯಕ್ತಿಯ ಬಂಧನವಾಗಬೇಕು. ನ್ಯಾಯ ದೊರಕಿಸಿಕೊಡುವವರಿಗೇ ಇಂದು ಭದ್ರತೆ ಇಲ್ಲದಂತಾಗಿದೆ. ಹೀಗಾದರೆ ಕಾರ್ಯನಿರ್ವಹಿಸುವುದು ಹೇಗೆ ಎಂದು ಪ್ರಶ್ನಿಸಿದರಲ್ಲದೇ, ಅಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ರಾಮಮೂರ್ತಿ, ಮಹೇಶ್ ಎಸ್.ಪಿ. ರಘುನಾಥ್, ಹೊಯ್ಸಳ, ಮಹೇಶ್, ರವಿಕುಮಾರ್ ಸೇರಿದಂತೆ ಹಿರಿಯ ಕಿರಿಯ ವಕೀಲರುಗಳು ಪಾಲ್ಗೊಂಡಿದ್ದರು.