ಭೌತಶಾಸ್ತ್ರ ಒಲಿಂಪಿಯಾಡ್‌ನಲ್ಲಿ ಭಾರತ ಐತಿಹಾಸಿಕ ಸಾಧನೆ

Update: 2018-07-30 18:10 GMT

ಮುಂಬೈ: ಪೋರ್ಚುಗಲ್‌ನ ಲಿಸ್ಬಾನ್‌ನಲ್ಲಿ ನಡೆದ ಅಂತರ್‌ರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಎಲ್ಲ ಐದು ಮಂದಿ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಭಾರತ ತಂಡದ ಎಲ್ಲರೂ ಚಿನ್ನ ಗಳಿಸುತ್ತಿರುವುದು 21 ವರ್ಷದ ಒಲಿಂಪಿಯಾಡ್ ಇತಿಹಾಸದಲ್ಲೇ ಇದು ಮೊದಲು. ಒಲಿಂಪಿಯಾಡ್‌ನಲ್ಲಿ ಭಾಗವಹಿಸಿದ್ದ 86 ದೇಶಗಳ ಪೈಕಿ ಭಾರತ ಹೊರತುಪಡಿಸಿದರೆ ಚೀನಾ ಮಾತ್ರ ಗರಿಷ್ಠ ಚಿನ್ನದ ಪದಕ ಗೆದ್ದ ದೇಶ. ಮುಂಬೈನ ಭಾಸ್ಕರ್ ಗುಪಾತಿ, ಕೋಟಾದ ಲೇ ಜೈನ್, ರಾಜಕೋಟ್‌ನ ನಿಶಾಂತ್ ಅಭಂಗಿ, ಜೈಪುರದ ಪವನ್ ಗೋಯಲ್ ಮತ್ತು ಕೊಲ್ಕತ್ತಾದ ಸಿದ್ಧಾರ್ಥ ತಿವಾರಿ 49ನೇ ಅಂತರ್‌ರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ವಿಶ್ವದ ವಿವಿಧ ದೇಶಗಳಿಂದ 396 ವಿದ್ಯಾರ್ಥಿಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ 42 ಚಿನ್ನದ ಪದಕಗಳನ್ನು ಎರಡು ಹಂತಗಳ ಸ್ಪರ್ಧೆ ಬಳಿಕ ವಿವಿಧ ದೇಶಗಳ ವಿದ್ಯಾರ್ಥಿಗಳು ಗೆದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor