ಕಿದುವಿನ ಸಿಪಿಸಿಆರ್‌ಐ ಉಳಿಸಲು ಕೇಂದ್ರ ಸಚಿವರ ಭರವಸೆ
Update: 2018-07-31 22:50 IST
ಹೊಸದಿಲ್ಲಿ, ಜು.31: ಕುಕ್ಕೆ ಸುಬ್ರಹ್ಮಣ್ಯದ ಕಿದುವಿನಲ್ಲಿರುವ ತೆಂಗು ಜೀನ್ ಬ್ಯಾಂಕ್ ಖ್ಯಾತಿಯ ಸಿಪಿಸಿಆರ್‌ಐ ಸಂಸ್ಥೆಯ ಭೂಮಿಯ ಲೀಸ್ ನವೀಕರಣದ ಬಗ್ಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಡಾ.ಹರ್ಷ ವರ್ಧನ್ ಭರವಸೆ ನೀಡಿದ್ದಾರೆ.
ಕೇಂದ್ರ ಅಂಕಿ ಅಂಶ ಮತ್ತು ಯೋಜನೆ ಅನುಷ್ಠಾನ ಸಚಿವ ಡಿ. ವಿ.ಸದಾನಂದ ಗೌಡ ಸಂಸದ ನಳಿ ನ್ ಕುಮಾರ್ ಕಟೀಲ್ ಮತ್ತು ಕಾಸರಗೋಡು ಸಿಪಿಸಿಆರ್‌ಐ ನಿರ್ದೇಶಕ ಡಾ. ಪಿ. ಚೌಡಪ್ಪ ನೇತೃತ್ವದ ನಿಯೋಗ ಮಂಗಳವಾರ ಕೇಂದ್ರ ಸಚಿವ ಡಾ.ಹರ್ಷವರ್ಧನ್‌ರನ್ನು ಭೇಟಿಯಾಗಿ ಕಿದುವಿನಲ್ಲಿ ತೆಂಗು ಅಭಿವೃದ್ಧಿ ಕೇಂದ್ರ ಉಳಿಸಲು ಅಗತ್ಯದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
ನಿಯೋಗದ ಮನವಿಗೆ ಸಚಿವ ಸಚಿವ ಡಾ.ಹರ್ಷ ವರ್ಧನ್ ಸಕರಾತ್ಮಕವಾಗಿ ಸ್ಪಂದಿಸಿ ಕಿದುವಿನ ಸಿಪಿಸಿಆರ್‌ಐನ್ನು ಉಳಿಸುವ ಭರವಸೆ ನೀಡಿದ್ದಾರೆ ಎಂದು ಸಚಿವ ಡಿ.ವಿ. ಸದಾನಂದ ಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.