ಬಾಗೇಪಲ್ಲಿ: ಪ್ರೀತಿಸುವಂತೆ ಬಲವಂತ ಮಾಡಿದ ಯುವಕ; ವಿದ್ಯಾರ್ಥಿನಿ ಆತ್ಮಹತ್ಯೆ
ಬಾಗೇಪಲ್ಲಿ,ಅ.01: ಹುಡುಗನೊಬ್ಬ ಪ್ರೀತಿಸುವಂತೆ ಬಲವಂತ ಮಾಡುತ್ತಿದ್ದರಿಂದ ಮನನೊಂದ ಶಾಲಾ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾತಪಾಳ್ಯ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಾತಪಾಳ್ಯ ಹೋಬಳಿ ರಾಚವಾರಪಲ್ಲಿ ಗ್ರಾಮದ ರೇಣುಕ(13) ಸೋಮನಾಥಪುರ ಮಮತ ವಿದ್ಯಾನೀಕೇತನ ಅನುದಾನಿತ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಪ್ರತಿ ದಿನ ತಮ್ಮ ಗ್ರಾಮದಿಂದ ಶಾಲೆಗೆ ನಡೆದುಕೊಂಡು ಹೋಗಿ ಬರುತ್ತಿದ್ದಳು. ದಾರಿ ಮದ್ಯೆ ಅದೇ ಗ್ರಾಮದ ನಾಗರಾಜ ಎಂಬಾತ ವಿದ್ಯಾರ್ಥಿನಿಗೆ ದಾರಿಯಲ್ಲಿ ಅಡ್ಡಗಟ್ಟಿ ತನ್ನನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ
ಈ ಬಗ್ಗೆ ಮೃತ ಬಾಲಕಿ ಪೋಷಕರಿಗೆ ದೂರು ಹೇಳುತ್ತಿದ್ದಳು. ಆದರೂ ಅವನಿಗೆ ಬುದ್ದಿವಾದ ಹೇಳದೆ ತನಗೆ ಬುದ್ದಿವಾದ ಹೇಳಿದರೆಂದು ಮನನೊಂದ ವಿದ್ಯಾರ್ಥಿನಿ ಕಳೆದ ರಾತ್ರಿ ಬೆಳೆಗಳಿಗೆ ಹೊಡೆಯುವ ಕ್ರಿಮಿನಾಶಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಪಾತಪಾಳ್ಯ ಪಿಎಸೈ ರಂಜನ್ ಕುಮಾರ್ ಪರಿಶೀಲನೆ ನಡೆಸಿ ನಾಗರಾಜು ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.