ಸುಂಟಿಕೊಪ್ಪ: ಬೈಕ್-ಕಾರು ಮುಖಾಮುಖಿ ಢಿಕ್ಕಿ; ಇಬ್ಬರಿಗೆ ಗಂಭೀರ ಗಾಯ
Update: 2018-08-02 17:38 IST
ಸುಂಟಿಕೊಪ್ಪ,ಆ.2: ಬೈಕ್ ಕಾರು ನಡುವೆ ನಡೆದ ಮುಖಾಮುಖಿ ಢಿಕ್ಕಿಯಲ್ಲಿ ಬೈಕ್‍ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಬಗ್ಗೆ ವರದಿಯಾಗಿದೆ.
ಗಾಯಾಳುಗಳು ಬೈಕ್ ಸವಾರ ಗಣಿ (42) ಮತ್ತು ಆತನ ಪುತ್ರಿ ಪರಿಣಿತ (9) ಎಂದು ತಿಳಿದು ಬಂದಿದೆ.
ಇಲ್ಲಿಗೆ ಸಮೀಪದ ಬಾಳೆಕಾಡು ತಿರುವಿನಲ್ಲಿ ಸುಂಟಿಕೊಪ್ಪದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನ(ಕೆಎ09 ವೈ-1725) ಹಾಗೂ ಮಂಗಳೂರಿನಿಂದ ಸುಂಟಿಕೊಪ್ಪ ಕಡೆಗೆ ಸಾಗುತ್ತಿದ್ದ ಮಾರುತಿ ಕಾರು (ಕೆಎ19 ಎಂಎ 4827) ವಾಹನಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಈ ವೇಳೆ ಬೈಕ್ ಸವಾರರಿಗೆ ಗಾಯಗಳಾಗಿದ್ದು, ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ.
ಸುಂಟಿಕೊಪ್ಪ ಪೊಲೀಸರು ಮೊಕದ್ದಮೆ ದಾಖಲಿಸಿ, ವಾಹನಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.