ಹರಿಹರ: ಆಟೋಗೆ ಬಸ್ ಢಿಕ್ಕಿ; ದಂಪತಿ ಸ್ಥಳದಲ್ಲೇ ಮೃತ್ಯು
Update: 2018-08-02 18:06 IST
ಹರಿಹರ,ಆ.02: ಗುಂಡಿ ತಪ್ಪಿಸಲು ಆಟೋ ರಸ್ತೆ ಬದಿಗೆ ಸಾಗಿದ ಪರಿಣಾಮ ಎದುರಿಗೆ ಬರುತ್ತಿದ್ದ ಬಸ್ ಢಿಕ್ಕಿಯಾಗಿ ಆಟೋದಲ್ಲಿದ್ದ ದಂಪತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪಟ್ಟಣದ ಹೊರವಲಯದ ಹಿರೇಕೆರೆ ಬಳಿ ನಡೆದಿದೆ.
ಹರಪನಹಳ್ಳಿಯ ಆಶ್ರಯ ಬಡಾವಣೆಯ ನಿವಾಸಿಗಳಾದ ನಾಗರಾಜ್ (38) ಮತ್ತು ಲಕ್ಷ್ಮಿ(29) ಮೃತಪಟ್ಟ ದಂಪತಿ.
ಹರಿಹರ ರಸ್ತೆಯಲ್ಲಿರುವ ಕ್ಯಾಂಪ್‍ನಿಂದ ಆಟೋದಲ್ಲಿ ಬರುತ್ತಿದ್ದಾಗ ಆಟೋ ಚಾಲಕ ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಸೈಡ್ ತೆಗೆದುಕೊಂಡ ಸಂದರ್ಭ ಎದುರಿಗೆ ಬರುತ್ತಿದ್ದ ಬಸ್ ಢಿಕ್ಕಿಯಾಗಿದೆ ಎನ್ನಲಾಗಿದ್ದು, ಬಸ್ ಚಾಲಕ ಅಪಘಾತ ನಡೆಯುತ್ತಿದ್ದಂತೆ ಬಸ್ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಹರಪನಹಳ್ಳಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.