ಕುಶಾಲನಗರದಲ್ಲಿ ಅಗ್ನಿ ಆಕಸ್ಮಿಕ: ಮಾರ್ಬಲ್ ಮತ್ತು ಟೈಲ್ಸ್ ಶೆಡ್‍ಗೆ ಹಾನಿ
Update: 2018-08-02 19:13 IST
ಮಡಿಕೇರಿ, ಆ.2: ಮಾರ್ಬಲ್ ತುಂಬಿದ ಶೆಡ್ ಒಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಬಹುತೇಕ ವಸ್ತುಗಳು ಭಸ್ಮವಾದ ಘಟನೆ ಬುಧವಾರ ತಡರಾತ್ರಿ ಕುಶಾಲನಗರದಲ್ಲಿ ನಡೆದಿದೆ.
ಟಾಟಾ ಪೆಟ್ರೋಲ್ ಬಂಕ್ ಮುಂಭಾಗದಲ್ಲಿರುವ ಪುರುಷೋತ್ತಮ್ ಎಂಬವರಿಗೆ ಸೇರಿದ ಕಾವೇರಿ ಮಾರ್ಬಲ್ ಮತ್ತು ಟೈಲ್ಸ್ ಅಂಗಡಿಗೆ ರಾತ್ರಿ 1.30 ಗಂಟೆ ವೇಳೆಗೆ ಬೆಂಕಿ ತಗುಲಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ. ಅಂಗಡಿ ಒಳಗಡೆ ಮಲಗಿದ್ದ ಮೂವರು ಕಾರ್ಮಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ರಾತ್ರಿಯಿಂದ ಬೆಳಗಿನ ತನಕ ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಲಕ್ಷಾಂತರ ರೂ. ಮಾರ್ಬಲ್ ಮತ್ತಿತರ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.