ಹಾಸನ: ಮಿನಿ ಟೆಂಪೋ ಅಪಘಾತ; 20ಕ್ಕೂ ಹೆಚ್ಚು ಮಂದಿಗೆ ಗಾಯ

Update: 2018-08-02 14:30 GMT

ಹಾಸನ,ಆ.02: ಎದುರಿನಿಂದ ಬಂದ ಬೈಕ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ, ಚಾಲಕನ ನಿಯಂತ್ರಣ ತಪ್ಪಿದ ಮಿನಿ ಟೆಂಪೋ ಪಲ್ಟಿಯಾದ ಪರಿಣಾಮ 20 ಕ್ಕೂ ಹೆಚ್ಚು ಜನರಿಗೆ ಗಾಯಗಳಾದ ಘಟನೆ ತಾಲೂಕಿನ ಮರ್ಕುಲಿ ಗ್ರಾಮದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ಗಾಯಾಳುಗಳನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ನಗರದ ಮಂಗಳ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಮರ್ಕುಲಿ, ಹೊಂಗೆರೆ ಸುತ್ತಮುತ್ತಲಿನ ಗ್ರಾಮಗಳ 25ಕ್ಕೂ ಹೆಚ್ಚು ಮಹಿಳೆಯರು ಮಿನಿ ಟೆಂಪೋದಲ್ಲಿ ನಗರದ ಕೈಗಾರಿಕಾ ಪ್ರದೇಶಕ್ಕೆ ಗಾರ್ಮೆಂಟ್ಸ್ ಕೆಲಸಕ್ಕೆಂದು ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಬೈಕ್‍ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಟೆಂಪೋ ರಸ್ತೆಯಿಂದ ಕೆಳಗೆ ಉರುಳಿದೆ.

ಪರಿಣಾಮ ಮರ್ಕುಲಿ ಮತ್ತು ಹೊಂಗೆರೆ ಗ್ರಾಮದ ಪುಷ್ಪ (26) ಅನಿತಾ(30) ತೇಜಾವತಿ(30) ಶಶಿಕಲಾ(30) ಪುಷ್ಪ(30) ಸುಧಾ(28) ಮಂಜುಳಾ(30), ಮೇಘನಾ(19) ಶೃತಿ(27) ಲಕ್ಷ್ಮೀ(30) ಪುಟ್ಟಲಕ್ಷ್ಮೀ(45) ಶಶಿ(40) ಮಮತಾ(30) ಸುಮಿತ್ರ (32) ರೇಣುಕಾ(30) ಶಾಲಿನಿ(19) ಅರ್ಪಿತಾ(20) ದಾಕ್ಷಾಯಿಣಿ(19) ಅಶ್ವಿನಿ(20) ಕವಿತಾ(25) ರಾಣಿ(22) ಮಣಿ(27) ಶೃತಿ(28) ಬಾಲು(27) ಎಂಬವರಿಗೆ ಗಾಯಗಳಾಗಿವೆ.

ಗಾಯಗೊಂಡವರನ್ನು ತಕ್ಷಣ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಮಿನಿ ಲಾರಿ ಚಾಲಕನನ್ನು ಹೊಂಗೆರೆ ಗ್ರಾಮದ ಶಶಿಕಾಂತ್ ಎಂದು ಹೇಳಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News