ಗ್ರಾಮಗಳ ಅಭಿವೃದ್ದಿಗೆ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಸಹಕಾರಿ: ಪಿಡಿಒ ಸುರೇಶ್
ಹನೂರು,ಆ.04: ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಗ್ರಾಮಗಳ ಅಭಿವೃದ್ದಿಗೆ ಸಹಾಯಕಾರಿಯಾಗಿದೆ ಎಂದು ಪಿಡಿಒ ಸುರೇಶ್ ತಿಳಿಸಿದರು.
ಹನೂರು ಸಮೀಪದ ಅಜ್ಜಿಪುರ ಗ್ರಾಮದಲ್ಲಿ ಆಯೋಜಿಸಿದ್ದ ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋದನೆ 2018-19 ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಅವಧಿಯ ನರೇಗಾದಡಿಯಲ್ಲಿ ಈಗಾಗಲೇ 97 ಕಾಮಗಾರಿಗಳಾಗಿದ್ದು, ಇದಕ್ಕೆ 44.19 ಲಕ್ಷ ಖರ್ಚುಗಳಾಗಿವೆ. ನರೇಗಾ ಯೋಜನೆಯ ಮೂಲಕ ಕೊಟ್ಟಿಗೆ ನಿರ್ಮಾಣ, ಜಮೀನುಗಳ ಸಮತಟ್ಟು, ಶೌಚಾಲಯ, ಮನೆ ನಿರ್ಮಾಣ, ಚೆಕ್ ಡ್ಯಾಂ, ಸಿ.ಸಿ ರಸ್ತೆ ಚರಂಡಿ ನಿರ್ಮಾಣದ ಜೊತೆಗೆ ವೈಯಕ್ತಿಕ ಕಾಮಗಾರಿಗಳನ್ನು ಮಾಡಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಅಭಿವೃದ್ದಿ ಕೆಲಸಗಳನ್ನು ಮಾಡಲು ಈ ಯೋಜನೆ ಪೂರಕವಾಗಿದೆ ಎಂದರು.
ಈ ಸಂದರ್ಭ ಬಸವರಾಜಮ್ಮ, ರಾಜಮಣಿ, ಮುರುಡೇಶ್ವರ್, ತಾಲೂಕು ಸಂಯೋಜಕ ಮನೋಹರ್, ಗ್ರಾಪಂ ಕಾರ್ಯದರ್ಶಿ ಮಹೇಂದ್ರ, ಕರ ವಸೂಲಿಗಾರ ಮಹದೇವ, ಸಿಬ್ಬಂದಿ ವಿಕ್ರಮ್, ಇನ್ನಿತರರು ಹಾಜರಿದ್ದರು.