ಕಾಫಿ ಡೇಯಲ್ಲಿ ಕಾಫಿ ಹೀರುತ್ತಾ ಜಗಳ ಮರೆಯುತ್ತೇವೆ: ಬೆಮೆಲ್ ರಮೇಶ ಶೆಟ್ಟಿ

Update: 2018-08-05 10:15 GMT

► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು? 

ನನ್ನ ಬೆಸ್ಟ್ ಫ್ರೆಂಡ್ ಹೆಸರು ಸೋನು ಸೌಮ್ಯ ಬೆಂಗಳೂರಿನವಳು.

► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ? 

ಜನವರಿ 17- 2018ರಂದು ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಕಾವ್ಯ ಕಮ್ಮಟ ಕಾರ್ಯಕ್ರಮದಲ್ಲಿ ನಾನು ಕವಿತೆ ಬರೆಯುತ್ತಿದ್ದೆ. ಆ ಸಂದರ್ಭ “ಸಾರ್ ನಿಮ್ಮೊಡನೆ ಒಂದು ಸೆಲ್ಫಿ” ಎಂದು ಕೇಳಿದ್ದಳು. ಆನಂತರ ಅವಳ ಪರಿಚಯವಾಯಿತು.

► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ? 

ಈಕೆಯ ಗುಣ ತಾಯಿಯ ಮಮತೆ, ಸೋದರ ಸಂಬಂಧಗಳನ್ನು ಮೀರಿಸುವಂತದ್ದು, ನಿಷ್ಕಲ್ಮಶ ಮನಸ್ಸು.

► ನಿಮ್ಮ ಬೆಸ್ಟ್ ಫ್ರೆಂಡ್ ನಿಮಗೆ ಸಿಟ್ಟು ಬರಿಸುವುದು ಯಾವಾಗ ? 

ಆಕೆ ಒಮ್ಮೊಮ್ಮೆ ನೀವು ದೊಡ್ಡವರು, ತಿಳಿದವರು, ಎಂದಾಗ ಕೋಪ ಬರುತ್ತದೆ. ಸಹಿಸಿಕೊಂಡು ಸ್ನೇಹಕ್ಕೆ ಹಿರಿತನ ಕಿರಿತನವೆಂಬುದಿಲ್ಲ ಎಂದು ತಿಳಿಹೇಳುತ್ತೇನೆ.

► ನಿಮ್ಮ ನಡುವಿನ ಸಾಮ್ಯತೆಗಳು (ಫೇವರಿಟ್ ನಟ, ಆಹಾರ, ಕ್ರಿಕೆಟಿಗ ಇತ್ಯಾದಿ ) ? 

ನನ್ನ ಅವಳ ಅಭಿರುಚಿಯಲ್ಲಿ ಭಿನ್ನವಿಲ್ಲ.ಅದೇ ನಮ್ಮ ಸ್ನೇಹಕ್ಕೆ ಭದ್ರ ಬುನಾದಿ. ನಮ್ಮ ಅಭಿರುಚಿಯಲ್ಲಿ ಸಾಮ್ಯತೆ ಕಾಣಬಹುದು ನಟರಲ್ಲಿ ಡಾ.ರಾಜಕುಮಾರ್ ಇಷ್ಟ, ಆಹಾರದ ವಿಷಯಕ್ಕೆ ಬಂದರೆ ವೆಜ್ ಪಲಾವ್ ಇಷ್ಟ, ಕ್ರಿಕೆಟ್ ವಿಚಾರಕ್ಕೆ ಬಂದರೆ ವಿರಾಟ್ ಕೊಹ್ಲಿ ಇಷ್ಟವಾಗುತ್ತಾರೆ.

► ನಿಮ್ಮ ನಡುವಿನ ವಿರೋಧಾಭಾಸಗಳು ? 

ಶಾಪಿಂಗ್ ಮಾಡುವುದೆಂದರೆ ಅವಳಿಗೆ ಬಲು ಇಷ್ಟ. ಆದರೆ ನನಗೆ ಬಲು ಕಷ್ಟ.

► ನಿಮ್ಮ ನಡುವೆ ಏನಾದರೂ ಜಗಳ ನಡೆದಿದೆಯೇ ? 

ಶಾಪಿಂಗ್ ವಿಚಾರಕ್ಕೆ ಹಲವು ಬಾರಿ ಜಗಳವಾಡಿದ ನಿದರ್ಶನಗಳಿವೆ. ಆದರೆ, ಸ್ನೇಹಕ್ಕೆ ಕಟ್ಟು ಬಿದ್ದು ನಾನೇ ಸಾರಿ ಕೇಳಿ ರಾಜಿಯಾಗಿ  ಕಾಫಿ ಡೇಯಲ್ಲಿ  ಕಾಫಿ ಹೀರುತ್ತಾ ಜಗಳ ಮರೆಯುತ್ತೇವೆ.

► ನಿಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದ್ರೆ ಏನು ? 

ಸ್ನೇಹ, ರಕ್ತ ಸಂಬಂಧಗಳನ್ನೂ ಮೀರಿದ ಬಂಧ. ಸ್ನೇಹಿತರಿಲ್ಲದ ಬದುಕು ಊಹಿಸಲೂ ಅಸಾಧ್ಯ. ನಮ್ಮ ಜೀವನದಲ್ಲಿ ಎದುರಾಗುವ ಪ್ರತಿಯೊಂದು ನೋವು ನಲಿವಿನಲ್ಲಿ, ಕಷ್ಟ ಸುಖಗಳಲ್ಲಿ ಅವರಿದ್ದರೇನೆ ಅದಕ್ಕೊಂದು ಅರ್ಥ. ರಕ್ತ ಸಂಬಂಧಗಳನ್ನೇ ಮೀರಿಸೋ ಈ ಅನುಬಂಧಕ್ಕೆ ವಯಸ್ಸಿನ ಮಿತಿಯಿಲ್ಲ.

► ನಿಮ್ಮ ಪ್ರಕಾರ ಬೆಸ್ಟ್ ಫ್ರೆಂಡ್ ಹೇಗಿರಬೇಕು ? 

ಜಾತಿ ಧರ್ಮದ ಹಂಗಿಲ್ಲ. ಪರಸ್ಪರ ನಂಬಿಕೆ, ಕಾಳಜಿ, ಪ್ರೀತಿ, ಆತ್ಮೀಯತೆ.. ಹೀಗೆ ಮತ್ತೊಬ್ಬರ ನಗುವಿಗೆ, ಕಣ್ಣೀರಿಗೆ ಸಾಥ್ ಕೊಟ್ಟು ಜೊತೆಯಲ್ಲೇ ಬೆರೆಯುವ ಮಧುರ ಸಂಬಂಧವೇ ಸ್ನೇಹ.

► ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ನಿಮಗೆ ಯಾವತ್ತಾದರೂ ಹೊಟ್ಟೆಕಿಚ್ಚಾಗಿದೆಯೇ ? ಹೌದು ಎಂದಾದರೆ ಏಕೆ ? 

ಅವಳ ಔದಾರ್ಯ,ಆತ್ಮ ಸ್ಥೈರ್ಯ ನನ್ನಲ್ಲಿ ಒಮ್ಮೊಮ್ಮೆ ಹೊಟ್ಟೆ ಕಿಚ್ಚುಂಟಾಗುವಂತೆ ಮಾಡುತ್ತದೆ.

► ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ ?

ಅವಳು ನನ್ನ ಸ್ನೇಹಿತೆ, ಜೀವದ ಗೆಳತಿ, ಸಂಕಷ್ಟದಲ್ಲಿದ್ದಾಗ ಕೈ ಚಾಚುವ ಸಂಬಂಧಿ. ನನ್ನ ಜೀವನದಲ್ಲಿ ಹಲವಾರು ಸ್ನೇಹಿತರು ಬಂದು ಹೋಗಿದ್ದಾರೆ. ಅವರ ನೆನಪು ಸದಾ ಕಾಡುತ್ತಿರುತ್ತದೆ.

- ಬೆಮೆಲ್ ರಮೇಶ ಶೆಟ್ಟಿ.ಎ, ಮೈಸೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಭಾವ - ವಿಕಲ್ಪ
ಕಥೆಗಾರ