ಗೆಳೆಯನ ಲುಂಗಿಗೆ ನನ್ನ ವಿರೋಧವಿತ್ತು: ಸಮೀರ್ ಟಿಪ್ಪುನಗರ

Update: 2018-08-05 10:49 GMT

► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು? 

ನವಾಝ್ ಕೆ.ಎಂ. ಮಲಾರ್

► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?

ನಮ್ಮ ಭೇಟಿ ಬಾಲ್ಯದ ದಿನಗಳ ಮದ್ರಸದಲ್ಲಿ ನಡೆಯಿತು.

► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ? 

ಮದ್ರಸದಲ್ಲಿ ಕಲಿಯುವ ಬಗ್ಗೆ ನನಗೆ ಹೆಚ್ಚಿನ ಆಸಕ್ತಿ ಮೂಡಿದ್ದು ಇದೇ ಗೆಳೆಯನಿಂದ. ಅವನು ಕಲಿಕೆಯಲ್ಲಿ ಭಾರೀ ಜಾಣ.

► ಆ ಬೆಸ್ಟ್ ಫ್ರೆಂಡ್ ನಲ್ಲಿ ನೀವು ಅತ್ಯಂತ ಹೆಚ್ಚು ಇಷ್ಟಪಡುವ ಗುಣಗಳೇನು ? 

ಸದಾ ನಗು ಹಾಗೂ ಉತ್ತಮ ಮಾತು. ಸಭ್ಯತೆಯ ನಡೆ. ಇದು ನನ್ನ ಗೆಳಯನಲ್ಲಿ ಹೆಚ್ಚು ಇಷ್ಟ ಪಡುವ ಗುಣಗಳು.

► ನಿಮ್ಮ ಬೆಸ್ಟ್ ಫ್ರೆಂಡ್ ನಿಮಗೆ ಸಿಟ್ಟು ಬರಿಸುವುದು ಯಾವಾಗ ? 

ನಾವೊಂದು ಕಡೆ ಹೋಗಲು ಒಂದು ಸಮಯ ನಿಗದಿ ಪಡಿಸಿದ್ದರೂ ಸಮಯಕ್ಕೆ ಸರಿಯಾಗಿ ಬಾರದೆ ಇರುವುದು ನನಗೆ ಸಿಟ್ಟು ಬರಿಸುತ್ತದೆ.

► ನಿಮ್ಮ ನಡುವಿನ ಸಾಮ್ಯತೆಗಳು (ಫೇವರಿಟ್ ನಟ, ಆಹಾರ, ಕ್ರಿಕೆಟಿಗ ಇತ್ಯಾದಿ ) ?

ನಾನು ಸಿನಿಮಾ ನಟರನ್ನು ಇಷ್ಟ ಪಡಲ್ಲ. ಈ ವಿಷಯದಲ್ಲಿ ನನ್ನ ಫ್ರೆಂಡ್ ಕೂಡಾ ತುಂಬಾ ದೂರ. ನನಗೆ ಊಟದಲ್ಲಿ ತರಕಾರಿ ಪದಾರ್ಥ ತುಂಬಾ ಇಷ್ಟ. ಆದರೆ ನನ್ನ ಫ್ರೆಂಡ್ ಮಾಂಸಾಹಾರಿ. ಅದು ಅವನಿಗೆ ಇಷ್ಟವೂ ಕೂಡ. ಕ್ರಿಕೆಟ್‌  ನಲ್ಲಿ ನಾವಿಬ್ಬರೂ ಒಂದೇ ಟೀಂ, ನನ್ನ ಫೇವರಿಟ್ ಆಟಗಾರ ಮುಹಮ್ಮದ್ ಕೈಫ್. ನನ್ನ ಗೆಳೆಯನ ಫೇವರಿಟ್ ಆಟಗಾರ ಸೆಹ್ವಾಗ್.

► ನಿಮ್ಮ ನಡುವಿನ ವಿರೋಧಾಭಾಸಗಳು ? 

ನಾನು ಹೆಚ್ಚಾಗಿ ಹೊರಗಡೆ ತಿರುಗಾಡಲು ಬಯಸುವೆ. ನನ್ನ ಗೆಳೆಯ ಊರಿನಲ್ಲೆ ಸಮಯ ಕಳೆಯಲು ಬಯಸುವವ. ನಾನು ಊರಿನಲ್ಲಿದ್ದರೆ ಪ್ಯಾಂಟ್ ಶರ್ಟ್ ಟೀ ಶಟ್ ಹೆಚ್ಚಾಗಿ ಬಳಸುವೆ. ಗೆಳೆಯ ಲುಂಗಿ ತೊಟ್ಟು ಬರುತ್ತಿದ್ದ. ಇದಕ್ಕೆ ನನ್ನ ವಿರೋಧವಿತ್ತು.

► ನಿಮ್ಮ ನಡುವೆ ಏನಾದರೂ ಜಗಳ ನಡೆದಿದೆಯೇ ? 

ಸಣ್ಣ ವಿಚಾರಕ್ಕೆ ಜಗಳ ನಡೆದಿತ್ತು. ಅದರಿಂದ ನಾವು 5-6 ದಿನ ಮಾತನಾಡದೆ ಉಳಿದಿದ್ದೆವು...

► ಮೊದಲು ರಾಜಿ ಆದದ್ಯಾರು ? 

ನನ್ನ ಗೆಳೆಯನೇ ಮೊದಲು ರಾಜಿಯಾಗುತ್ತಿದ್ದ.

► ನಿಮ್ಮ ಪ್ರಕಾರ ಬೆಸ್ಟ್ ಫ್ರೆಂಡ್ ಹೇಗಿರಬೇಕು ? 

ನಮ್ಮ ಕಷ್ಟ -ಸುಖದಲ್ಲಿ ಭಾಗಿಯಾಗುವವನೇ ನಿಜವಾದ ಫ್ರೆಂಡ್‌. ನನ್ನ ಬೆಸ್ಟ್ ಫ್ರೆಂಡ್ ಮನೆಯವರೆಲ್ಲರಿಗೂ ಮೆಚ್ಚಿನ ಗೆಳೆಯನಾಗಬೇಕು. ಇತರರ ನೋವಿಗೆ ಸ್ಪಂದಿಸುವವನಾಗಬೇಕು.

► ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ನಿಮಗೆ ಯಾವತ್ತಾದರೂ ಹೊಟ್ಟೆಕಿಚ್ಚಾಗಿದೆಯೇ ? ಹೌದು ಎಂದಾದರೆ ಏಕೆ ? 

ಹೊಟ್ಟೆಕಿಚ್ಚುಪಡುವಂತಹ ಯೋಚನೆ ನನ್ನ ಮನಸ್ಸಿಗೆ ಬರಲೇ ಇಲ್ಲ.

► ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ?

ನನ್ನ ಇನ್ನೊಬ್ಬ ಬೆಸ್ಟ್ ಫ್ರೆಂಡ್ ಮುಸ್ತಫಾ ಹಸನ್ ಇಂಡೋನೇಶ್ಯದಲ್ಲಿ ದುಡಿಯುತ್ತಿದ್ದಾನೆ. ಅವನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಭಾವ - ವಿಕಲ್ಪ
ಕಥೆಗಾರ