ತುಮಕೂರು: ಶುದ್ದ ಕುಡಿಯುವ ನೀರಿನ ಘಟಕಗಳಿಗೆ ಶಾಸಕ ಗೌರಿಶಂಕರ್ ಚಾಲನೆ

Update: 2018-08-05 11:59 GMT

ತುಮಕೂರು,ಆ.05: ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ವಿವಿಧ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳಿಗೆ ಶಾಸಕ ಡಿ.ಸಿ.ಗೌರಿಶಂಕರ್ ಚಾಲನೆ ನೀಡಿದರು.

ಗ್ರಾಮಾಂತರ ಕ್ಷೇತ್ರಕ್ಕೆ ಒಳಪಡುವ ಕೆ.ಪಾಲಸಂದ್ರ ಪಂಚಾಯತ್ ನ ಸಂಕಾಪುರ, ಹೊನ್ನುಡಿಕೆ ಪಂಚಾಯತ್ ನ ಹೊನ್ನುಡಿಕೆ ಹ್ಯಾಂಡ್‍ಪೋಸ್ಟ್, ಬಳಗೆರೆ ಪಂಚಾಯತ್ ನ ವಡೆರಪುರ, ಮಲ್ಲಸಂದ್ರ ಪಂಚಾಯತ್ ನ ಹಬ್ಬತ್ತನಹಳ್ಳಿ, ಊರುಕೆರೆ ಪಂಚಾಯತ್ ನ ಅಣ್ಣೇನಹಳ್ಳಿ, ಅರಕೆರೆ ಪಂಚಾಯತ್ ನ ಅರಕೆರೆ, ಮೈದಾಳ ಪಂ.ನ ಬ್ಯಾತ, ಅರೆಗುಜ್ಜನಹಳ್ಳಿ ಪಂ.ನ ದೇವರಾಯನದುರ್ಗ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು ಜನರ ಸಮಸ್ಯೆ ಆಲಿಸಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಚಾಲನೆ ನೀಡಿದರು.

ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಅದರಂತೆ ಇಂದು 8 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಚಾಲನೆ ನೀಡಿದ್ದೇನೆ. ಮುಂಬರುವ ದಿನಗಳಲ್ಲಿ ಆದ್ಯತೆ ಮೇರೆಗೆ ಹಾಗೂ ಜನರ ಬೇಡಿಕೆಗೆ ಅನುಗುಣವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವುದಾಗಿ ಶಾಸಕ ಡಿ.ಸಿ.ಗೌರಿಶಂಕರ್ ಭರವಸೆ ನೀಡಿದರು.

ಇದೇ ತಿಂಗಳಿಂದ ಪ್ರತಿ ಸೋಮವಾರ, ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೂ, ತಾಲೂಕು ಪಂಚಾಯತ್ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿ ಲಭ್ಯವಿರುತ್ತೇನೆ. ಆದ್ದರಿಂದ ಕ್ಷೇತ್ರದ ಜನರು ಖುದ್ದಾಗಿ ಭೇಟಿಮಾಡಿ ತಮ್ಮ ಕುಂದು ಕೊರತೆಗಳನ್ನು ತಿಳಿಸಿ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಿಕೊಳ್ಳಬಹುದೆಂದು ತಿಳಿಸಿದರು.

ಈ ವೇಳೆ ಮಾಜಿ ಜಿ.ಪಂ. ಸದಸ್ಯ ರಾಮಚಂದ್ರಪ್ಪ, ವೈ.ಟಿ.ನಾಗರಾಜು, ನರುಗನಹಳ್ಳಿ ವಿಜಯಕುಮಾರ್, ವಡೇರಪುರ ಸ್ವಾಮಿ, ನರುಗನಹಳ್ಳಿ ಮಂಜುನಾಥ್, ಪಾಲಸಂದ್ರ ಮಧುಸೂಧನ್, ವಿಜಯಕುಮಾರ್, ಪ್ರಕಾಶ್, ಸಂಕಾಪುರ ನಾಗರತ್ನಮ್ಮ, ಬ್ಯಾತ ಸೋಮಶೇಖರಯ್ಯ, ಬೈರಾಪುರ ಶಂಕರ್, ಇತರ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News