×
Ad

ಕೊಡಗು: ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಬಿ.ಆರ್.ಸವಿತಾ ರೈ ಆಯ್ಕೆ

Update: 2018-08-05 19:42 IST

ಮಡಿಕೇರಿ ಆ.5: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಆರ್.ಸವಿತಾ ರೈ ಹಾಗೂ 15 ಮಂದಿ ನಿರ್ದೇಶಕರು ಭಾನುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಚುನಾವಣೆಯಲ್ಲಿ ಸವಿತಾ ರೈ 81 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದು, ಇವರ ಸಮೀಪದ ಪ್ರತಿಸ್ಪರ್ಧಿ ಚಮ್ಮಟ್ಟೀರ ಪ್ರವೀಣ್ 45 ಮತ ಹಾಗೂ ಜಿ.ವಿ.ರವಿ ಕುಮಾರ್ 21 ಮತಗಳನ್ನು ಪಡೆದುಕೊಂಡರು.

ನಿರ್ದೇಶಕರುಗಳಾಗಿ ಉದಯ್ ಮೊಣ್ಣಪ್ಪ (128 ಮತ), ಕುಪ್ಪಂಡ ದತ್ತಾತ್ರಿ(122), ಕುಡೆಕಲ್ ಗಣೇಶ್(121), ಚಂದ್ರ ಮೋಹನ್(114), ಚೆರಿಯಮನೆ ಸುರೇಶ್(110), ನವೀನ್ ಸುವರ್ಣ(125), ಎಂ.ಎನ್.ನಾಸೀರ್(119), ಪ್ರೇಮ್ ಕುಮಾರ್(115), ಮಂಜು ಸುವರ್ಣ(115),ಮನೋಜ್(114), ಮಲ್ಲಿಕಾರ್ಜುನ(115), ಮುಬಾರಕ್(121), ಯಶೋಧ(105), ರಾಜು ರೈ(110) ಮತ್ತು ಟಿ.ಕೆ. ಸಂತೋಷ್(134) ಆಯ್ಕೆಯಾಗಿದ್ದಾರೆ. ಚಟ್ರಂಗಡ ರವಿ ಸುಬ್ಬಯ್ಯ 74 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಅವಿರೋಧ ಆಯ್ಕೆ
ಸಂಘದ ಉಪಾಧ್ಯಕ್ಷರಾಗಿ ಪಳೆಯಂಡ ಪಾರ್ಥ ಚಿಣ್ಣಪ್ಪ, ಎಸ್.ಮಹೇಶ್, ಪ್ರಧಾನ ಕಾರ್ಯದರ್ಶಿಯಾಗಿ ಬಾಚರಣಿಯಂಡ ಅನು ಕಾರ್ಯಪ್ಪ, ಕಾರ್ಯದರ್ಶಿಗಳಾಗಿ ಪಿ.ಪಿ.ಆನಂದ್, ಎಚ್.ಕೆ.ಜಗದೀಶ್, ಎ.ಎನ್.ವಾಸು, ಖಜಾಂಚಿಯಾಗಿ ಎಂ.ಕೆ. ಅರುಣ್‍ಕುಮಾರ್, ರಾಜ್ಯ ಸಮಿತಿ ಸದಸ್ಯರಾಗಿ ಎ.ಆರ್.ಕುಟ್ಟಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕ ಪ್ರಮೋದ್ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News