×
Ad

ಹಾಸನ: ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಉದಯ್ ಕುಮಾರ್ ಆಯ್ಕೆ

Update: 2018-08-05 20:59 IST

ಹಾಸನ,ಆ.05: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ 2018-21ನೇ ಸಾಲಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ಉದಯಕುಮಾರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಜಿ. ಸುರೇಶ್ ಹೆಚ್ಚಿನ ಮತ ಪಡೆಯುವುದರ ಮೂಲಕ ಅಧಿಕೃತವಾಗಿ ಆಯ್ಕೆಗೊಂಡರು.

ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಪತ್ರಕರ್ತರು ಆಗಮಿಸಿ ಮತ ಚಲಾಯಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಸ್ಪರ್ಧೆ ಮಾಡಿದ್ದರು. ಬಾಳ್ಳುಗೋಪಾಲ್ ಸ್ಪರ್ಧೆ ಮಾಡಿ 82 ಮತಗಳನ್ನು ಪಡೆದರೆ, ಉದಯಕುಮಾರ್ ಅವರು 132 ಮತಗಳನ್ನು ಪಡೆಯುವುದರ ಮೂಲಕ ಜಯಗಳಿದರು. ಇನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಅಂಬಿಕಾಪ್ರಸಾದ್ 61 ಮತ ಪಡೆದರೆ, ಕೆ.ಜಿ. ಸುರೇಶ್ ಅವರು 149 ಮತಗಳನ್ನು ಪಡೆದು ಆಯ್ಕೆಯಾದರು. 

ಅವಿರೋಧ ಆಯ್ಕೆ:
ಇನ್ನು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಲೋಹಾಸನ್ ದಿನಪತ್ರಿಕೆ ಸಂಪಾದಕ ರವಿನಾಕಲಗೂಡು, ನಗರ ಕಾರ್ಯದರ್ಶಿಯಾಗಿ ಈ ಸಂಜೆ ಪತ್ರಿಕೆ ವರದಿಗಾರ ಸಿ.ಬಿ. ಸಂತೋಷ್, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದೂ ದಿನಪತ್ರಿಕೆಯ ಪ್ರಕಾಶ್, ಗ್ರಾಮೀಣ ಉಪಾಧ್ಯಕ್ಷರ ಎರಡು ಸ್ಥಾನಕ್ಕೆ ಆಲೂರು ವಿಜಯಕರ್ನಾಟಕ ದಿನಪತ್ರಿಕೆ ವರದಿಗಾರ ಎಂ.ಪಿ. ಹರೀಶ್, ಸಂಯುಕ್ತ ಕರ್ನಾಟಕ ದಿನಪತ್ರಿಕೆ ವರದಿಗಾರ ಅರಸೀಕೆರೆಯ ಬಿ.ಎಸ್. ಸೇತುರಾಂ, ಗ್ರಾಮೀಣ ಕಾರ್ಯದರ್ಶಿಯಾಗಿ ಎರಡು ಸ್ಥಾನಕ್ಕೆ ಹಾಸನವಾಣಿಯ ದಿನ ಪತ್ರಿಕೆ ವರದಿಗಾರ ವೈ.ಆರ್. ಭಾರತೀಗೌಡ ಮತ್ತು ವಿಜಯಕರ್ನಾಟಕ ದಿನಪತ್ರಿಕೆ ವರದಿಗಾರ ಅರಕಲಗೂಡಿನ ವಿಜಯಕುಮಾರ್ ಹಾಗೂ ಖಜಾಂಚಿಯಾಗಿ ಜ್ಞಾನದೀಪ ದಿನಪತ್ರಿಕೆ ಸಂಪಾದಕ ಡಿ.ಜಿ. ರಾಜಗೋಪಾಲ್ ಇವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. 

ಕಾರ್ಯಕಾರಿ ಸಮಿತಿ:
ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಗೆ, ಹಳೇಬೀಡು ಪ್ರಜಾವಾಣಿಯ ಹೆಚ್.ಎಸ್. ಅನೀಲ್ ಕುಮಾರ್, ಜಿ. ಚಂದ್ರಶೇಖರ್, ಸುವರ್ಣ ನ್ಯೂಸ್ ಕೆ.ಎಂ. ಹರೀಶ್, ವಿಶ್ವವಾಣಿ ಜಿಲ್ಲಾ ವರದಿಗಾರ ಜೋಸೆಫ್ ಡಿಸೋಜಾ, ಪ್ರಜಾವಾಣಿಯ ಜಾನೆಕೆರೆ ಪರಮೇಶ್, ಫಸ್ಟ್ ನ್ಯೂಸ್ ವಿ. ಕಿರಣ್, ಸಂಯುಕ್ತ ಕರ್ನಾಟಕದ ಹೆಚ್.ಟಿ. ಮೋಹನ್ ಕುಮಾರ್, ವಿಜಯವಾಣಿಯ ಮಂಜು ಬನವಾಸೆ, ಉದಯವಾಣಿಯ ಎನ್. ನಂಜುಂಡೇಗೌಡ, ಹಾಸನ ಮಿತ್ರದ ಎಸ್.ಆರ್. ಪ್ರಸನ್ನಕುಮಾರ್, ಅಮೋಘ ವಾಣಿಯ ಕೆ.ಪಿ.ಎಸ್. ಪ್ರಮೋದ್, ಕನ್ನಡ ಪ್ರಭಾದ ಪಿ. ರವಿಕುಮಾರ್, ಉದಯವಾಣಿಯ ರಾಧಾಕೃಷ್ಣ, ರಾಜ್ ನ್ಯೂಸ್ ವರದಿಗಾರ ಬಿ.ಸಿ. ಶಶಿಧರ, ಸತ್ಯದ ಹೊನಲು ದಿನಪತ್ರಿಕೆ ಸಂಪಾದಕ ವೇಣುಕುಮಾರ್ ಸೇರಿ ಒಟ್ಟು 15 ಮಂದಿ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಚುನಾವಣೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅತೀಖುರ್ ರೆಹಮಾನ್, ಸಹಾಯಕ ಚುನಾವಣೆ ಅಧಿಕಾರಿ ಬಿ.ಎಂ. ರವೀಶ್ ಹಾಗೂ ನಟರಾಜು ಚುನಾವಣೆಯಲ್ಲಿ ಗೆಲುವು ಪಡೆದ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿ ಶುಭ ಹಾರೈಸಿದರು. ನಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರು ನೂತನ ಅಧ್ಯಕ್ಷರನ್ನು ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜಿ. ಸುರೇಶ್ ಅವರಿಗೆ ಹಾರ ಹಾಕಿ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News