×
Ad

ಮಂಡ್ಯ: ಆಭರಣ ಪಾಲಿಷ್ ನೆಪದಲ್ಲಿ ವಂಚನೆ; ಮೂವರ ಬಂಧನ

Update: 2018-08-05 22:34 IST

ಮಂಡ್ಯ, ಆ.5: ಆಭರಣಗಳಿಗೆ ಪಾಲಿಷ್ ಮಾಡುವ ನೆಪದಲ್ಲಿ ಚಿನ್ನವನ್ನೇ ಕರಗಿಸಿ ವಂಚಿಸಲು ಯತ್ನಿಸುತ್ತಿದ್ದ ಬಿಹಾರ ಮೂಲದ ಮೂವರು ಯುವಕರನ್ನು ಗ್ರಾಮಸ್ಥರು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಮದ್ದೂರು ತಾಲೂಕಿನ ಬಸವೇಗೌಡನದೊಡ್ಡಿಯಲ್ಲಿ ನಡೆದಿದೆ.

ಕಳೆದ 15 ದಿನಗಳ ಹಿಂದೆಯೂ ಇದೇ ರೀತಿ ಚಿನ್ನ ಪಾಲಿಷ್ ಮಾಡುವ ನೆಪದಲ್ಲಿ ಗ್ರಾಮದ ಮಹಿಳೆಯೊಬ್ಬರು ವಂಚನೆಗೊಳಗಾಗಿದ್ದರು ಎನ್ನಲಾಗಿದೆ. ಈ ಘಟನೆ ಮಾಸುವ ಮುನ್ನವೆ ಶನಿವಾರ ಕೂಡ ಗ್ರಾಮಕ್ಕೆ ಬಂದ ಮೂವರು ಯುವಕರು ಪಾಲಿಷ್ ಮಾಡಿಕೊಡುವುದಾಗಿ ಮಹಿಳೆಯರನ್ನು ಪುಸಲಾಯಿಸುತ್ತಿದ್ದರು. 

ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಯುವಕರನ್ನು ಹಿಡಿದು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಬಳಿಕ ಮದ್ದೂರು ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮೂವರು ಬಿಹಾರದ ಯುವಕರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News