ಮಂಡ್ಯ: ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆ.ಸಿ.ಮಂಜುನಾಥ್ ನೇಮಕ
ಮಂಡ್ಯ, ಆ.5: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮಧುರ ಮಂಡ್ಯ ಸ್ಥಳೀಯ ಸಂಜೆ ಪತ್ರಿಕೆ ಸಂಪಾದಕ ಕೆ.ಸಿ.ಮಂಜುನಾಥ್ 109 ಮತಗಳನ್ನು ಪಡೆದು ಅಧ್ಯಕ್ಷರಾಗಿ ಚುನಾಯಿತರಾದರು. ಪ್ರತಿಸ್ಪರ್ಧಿ ಮಂಡ್ಯ ಸುದ್ದಿ ಸಂಪಾದಕ ಎಸ್.ಕೆ.ಬಾಲಕೃಷ್ಣ 64 ಮತ ಪಡೆದರು.
103 ಮತಗಳಿಸಿದ ವಿಜಯ ಕರ್ನಾಟಕ ಜಿಲ್ಲಾ ವರದಿಗಾರ ನವೀನ್ ಚಿಕ್ಕಮಂಡ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದರೆ, ಪ್ರತಿಸ್ಪರ್ಧಿ ಸಿ.ಎಸ್.ಉಮೇಶ್ ಚಿಕ್ಕಮಂಡ್ಯ 69 ಮತಗಳು ಪಡೆದು ಸೋಲುಂಡರು.
ಪ್ರಧಾನ ಕಾರ್ಯದರ್ಶಿಯಾಗಿ ಎಂ.ಕೆ.ಮೋಹನ್‍ರಾಜ್ 76 ಪಡೆದು ಜಯಶೀಲರಾದರೆ ಪ್ರತಿಸ್ಪರ್ಧಿಗಳಾದ ನವೀನ್ ಕುಮಾರ್ 69 ಮತ ಹಾಗೂ ನಾಗಯ್ಯ 24 ಮತ ಪಡೆದು ಪರಾಜಿತರಾದರು. 106 ಮತಗಳಿಸಿ ಖಜಾಂಚಿ ಸ್ಥಾನದ ಕೆ.ಶ್ರೀನಿವಾಸ್ ಗೆದ್ದರೆ, ಎದುರಾಳಿ ನಂಜುಂಡಸ್ವಾಮಿ 62 ಮತ ಪಡೆದರು.
ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಕೆರಗೋಡು ಸೋಮಶೇಖರ್, ನಗರ ಕಾರ್ಯದರ್ಶಿಯಾಗಿ ರವಿ ಲಾಲಿಪಾಳ್ಯ, ಗ್ರಾಮೀಣ ಉಪಾಧ್ಯಕ್ಷರಾಗಿ ಸಿ.ಎನ್.ಮಂಜುನಾಥ್, ಸಿ.ಆರ್.ರಮೇಶ್ ಮತ್ತು ಗ್ರಾಮೀಣ ಕಾರ್ಯದರ್ಶಿಗಳಾಗಿ ಜಯರಾಜ್ ಒಕ್ಕರಹಳ್ಳಿ ಹಾಗೂ ಲೋಕೇಶ್ ಚಿನಕುರಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.