×
Ad

​ಬಾಗೇಪಲ್ಲಿ: ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎಂ.ಮುನಿಕೃಷ್ಣಪ್ಪ ಆಯ್ಕೆ

Update: 2018-08-06 18:12 IST

ಬಾಗೇಪಲ್ಲಿ,ಆ.06: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಮುನಿಕೃಷ್ಣಪ್ಪ ಆಯ್ಕೆಯಾಗಿದ್ದಾರೆ.

ರವಿವಾರ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಎನ್.ವೆಂಕಟೇಶ್, ರಾಜ್ಯ ಕಾರ್ಯಕಾರಿ ಸಮಿತಿಗೆ ಭೀಮಪ್ಪ ಪಾಟೀಲ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಿ.ವೆಂಕಟೇಶ್, ಜೆ.ವಿ.ವಿ.ಚಲಪತಿ, ಎಂ.ಆನಂದ್, ಎನ್.ಜಗದೀಶ್ಬಾಬು, ಬಿ.ಕೆ.ಮುದ್ದುಕೃಷ್ಣ, ಮುಬಶ್ಶಿರ್ ಅಹಮದ್, ಬಿ.ಮಂಜುನಾಥ್, ವಿ.ರವಿಕುಮಾರ್, ಆರ್.ಮಂಜುನಾಥ್, ಏ.ವಿ.ರವಿಪ್ರಕಾಶ್, ಕೆ.ರಾಮಾಂಜಿನೇಯಲು, ಲೇಪಾಕ್ಷಿ ಸಂತೋಷ್ ರಾವ್, ಎನ.ವಿ.ವೆಂಕಟೇಶ್, ಎ.ಶಶಿಕುಮಾರ್, ಎಸ್.ಶಶಿಕುಮಾರ್ ಆಯ್ಕೆಯಾಗಿದ್ದಾರೆ.

ಇನ್ನು 3 ಜನ ಉಪಾಧ್ಯಕ್ಷರ ಪೈಕಿ ರಾಧಾಕೃಷ್ಣ ಹಾಗೂ ದೇವಿ ಮಂಜುನಾಥ್, ಕಾರ್ಯದರ್ಶಿಗಳಾಗಿ ಡಿ.ನ್.ಕೃಷ್ಣಾರೆಡ್ಡಿ, ಕೆ.ಹರಿಹರಕುಮಾರ್, ಖಜಾಂಚಿಯಾಗಿ ಕೆ.ಎಸ್.ನಾರಾಯಣಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ರೂಪಸಿ ರಮೇಶ್ ತಿಳಿಸಿದ್ದಾರೆ. 

ಈ ಸಂದರ್ಭ ನಿಕಟಪೂರ್ವ ಅಧ್ಯಕ್ಷ ಎಂ.ಜಯರಾಮ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ವಿನ್ಸಟೆನ್ ಕೆನಡಿ ಹಾಗೂ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News