ಗುಂಡ್ಲುಪೇಟೆ: ಅಪರಿಚಿತ ವ್ಯಕ್ತಿಯ ಶವ ಕೆರೆಯಲ್ಲಿ ಪತ್ತೆ
Update: 2018-08-06 18:19 IST
ಗುಂಡ್ಲುಪೇಟೆ,ಆ.06: ತಾಲೂಕಿನ ಶಿವಪುರ ಸಮೀಪದ ಕಲ್ಲುಕಟ್ಟೆ ಹಳ್ಳ ಕೆರೆಯಲ್ಲಿ ಸುಮಾರು 60 ವರ್ಷ ವಯಸ್ಸಿನ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ.
ಕೆರೆಯ ಸಮೀಪದ ಪೊದೆಯಲ್ಲಿ ಮೃತರ ಬಟ್ಟೆಗಳು ಪತ್ತೆಯಾಗಿದೆ. ಸುಮಾರು ಮೂರು ದಿನಗಳ ಹಿಂದೆ ಕೆರೆಯಲ್ಲಿ ಮುಳುಗಿದ್ದಾರೆನ್ನಲಾಗಿದ್ದು, ಸೋಮವಾರ ಮಧ್ಯಾಹ್ನ ಶವ ಕೆರೆಯಲ್ಲಿ ತೇಲುವುದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ತೆರಳಿದ ಪೊಲೀಸರು ಕೆರೆಯಿಂದ ಮೃತದೇಹವನ್ನು ಹೊರ ತೆಗೆಸಿ ಮರಣೋತ್ತರ ಪರೀಕ್ಷೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.