19 ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಆ.6: ರಾಜ್ಯ ಸರಕಾರವು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಹಿನ್ನೆಲೆಯಲ್ಲಿ 19 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ.
ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ-ಡಾ.ಎಸ್.ಸೆಲ್ವಕುಮಾರ್, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ- ಎಂ.ವಿ.ಸಾವಿತ್ರಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ಏಜೆನ್ಸಿಯ ಆಯುಕ್ತ-ಡಾ.ಆರ್.ವಿಶಾಲ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ- ಸಿ.ಶಿಖಾ.
ಪೌರಾಡಳಿತ ಇಲಾಖೆ ನಿರ್ದೇಶಕ-ಬಿ.ಎಸ್.ಶೇಖರಪ್ಪ, ರಾಜ್ಯ ಸಾರ್ವಜನಿಕ ಭೂ ನಿಗಮದ ವ್ಯವಸ್ಥಾಪಕ ನಿರ್ದೇಶಕ-ಮನೋಜ್ ಜೈನ್, ನೈರುತ್ಯ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ-ಪಿ.ರಾಜೇಂದ್ರ ಚೋಳನ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತ-ಟಿ.ಎಚ್.ಎಂ.ಕುಮಾರ್.
ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ-ಎಂ.ಕನಗಾವಲ್ಲಿ, ಗದಗ ಜಿಲ್ಲಾಧಿಕಾರಿ-ಎಂ.ಜಿ.ಹಿರೇಮಠ್, ಕೊಪ್ಪಳ ಜಿಲ್ಲಾಧಿಕಾರಿ-ಪೊಮ್ಮಾಲ ಸುನೀಲ್ ಕುಮಾರ್, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ-ಎಂ.ಸುಂದರೇಶ್ ಬಾಬು, ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ-ಚಾರುಲತಾ ಸೋಮಲ್, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ-ಸುರಲ್ಕರ್ ವಿಕಾಸ್ ಕಿಶೋರ್.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ-ಡಾ.ಅರುಂಧತಿ ಚಂದ್ರಶೇಖರ್, ಮುಖ್ಯಮಂತ್ರಿಯ ಉಪ ಕಾರ್ಯದರ್ಶಿ-ಸಿ.ಎನ್.ಮೀನಾ ನಾಗರಾಜ್, ಬಾಗಲಕೋಟೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ-ಗಂಗೂಬಾಯಿ ರಮೇಶ್ ಮಾನಕರ್, ವಿಜಯಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ-ಮಹಾಂತೇಶ್ ಬೀಳಗಿ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿಯನ್ನಾಗಿ ಕೆ.ಎ.ದಯಾನಂದ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.