ಬಸವಣ್ಣ, ವಿವೇಕಾನಂದರ ಕುರಿತು ಹೇಳಿಕೆ: ಕೆ.ಎಸ್.ಭಗವಾನ್ ವಿರುದ್ಧ ದೂರು

Update: 2018-08-06 15:57 GMT

ಮಂಡ್ಯ,ಆ.06: ಬಸವಣ್ಣ ಹಾಗೂ ವಿವೇಕಾನಂದರನ್ನು ಕೊಲೆ ಮಾಡಿದ್ದಾರೆ ಎಂಬ ಹೇಳಿಕೆ ನೀಡಿರುವ ಕೆ.ಎಸ್.ಭಗವಾನ್ ಅವರನ್ನು ಸಾಕ್ಷಿಯಾಗಿ ಪರಿಗಣಿಸಿ ಕೊಲೆಯ ತನಿಖೆ ನಡೆಸಬೇಕೆಂದು ಬಿಜೆಪಿ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರಿಗೆ ದೂರು ನೀಡಿದ್ದಾರೆ.

ಸ್ವಘೋಷಿತ ಬುದ್ಧಿಜೀವಿ, ವಿಚಾರವಾದಿ ಎನ್ನಲಾಗುವ ಕೆ.ಎಸ್.ಭಗವಾನ್ ಅವರು ಬಸವಣ್ಣ ಹಾಗೂ ಸ್ವಾಮಿ ವಿವೇಕಾನಂದರನ್ನು ಕೊಲೆ ಮಾಡಲಾಗಿದೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದು, ಮಾಧ್ಯಮಗಳಲ್ಲಿ ವರದಿಯಾಗಿದೆ. ಇವರು ಮಾನಸಿಕ ಅಸ್ವಸ್ಥರೋ ಅಥವಾ ಸಾಕ್ಷ್ಯಗಳನ್ನು ಇಟ್ಟುಕೊಂಡು ಆರೋಪ ಮಾಡುತ್ತಿದ್ದಾರೋ ತಿಳಿಯದಾಗಿದೆ. ಇಂತಹ ಹೇಳಿಕೆಗಳಿಂದ ಸಮಾಜದಲ್ಲಿ ಶಾಂತಿ ಕದಡುತ್ತಿದ್ದು, ಬಸವಣ್ಣ ಮತ್ತು ವಿವೇಕಾನಂದರ ಅನುಯಾಯಿಗಳ ಮನಸ್ಸಿಗೆ ನೋವುಂಟು ಮಾಡಿದೆ. ಆದ್ದರಿಂದ ಅವರ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಅವರನ್ನೇ ಸಾಕ್ಷ್ಯ ಎಂದು ಪರಿಗಣಿಸಿ ಮಹಾತ್ಮರ ಸಾವಿನ ತನಿಖೆ ನಡೆಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ಮುಖಂಡರಾದ ಸಿ.ಟಿ.ಮಂಜುನಾಥ್, ಎಸ್.ಶಿವಕುಮಾರ ಆರಾಧ್ಯ, ಹೊಸಹಳ್ಳಿ ಶಿವು, ಮಾದರಾಜು ಅರಸು, ಮಂಜುನಾಥ್, ಪಿ.ವಿ.ರಮೇಶ್, ಕೆ.ವಿ.ಪ್ರಸನ್ನ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News