ಬ್ರೈನೋಬ್ರೈನ್ ಉತ್ಸವ: ಮಡಿಕೇರಿ ಕೇಂದ್ರಕ್ಕೆ ಪ್ರಶಸ್ತಿ
ಮಡಿಕೇರಿ ಆ.7: 93ನೇ ಪ್ರಾಂತೀಯ ಬ್ರೈನೋಬ್ರೈನ್ ಉತ್ಸವ ಬೆಂಗಳೂರಿನ ನಿಮ್ಹಾನ್ಸ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಮಡಿಕೇರಿ ಕೇಂದ್ರಕ್ಕೆ ಅತ್ಯುತ್ತಮ ಫ್ರಾಂಚೈಸಿ ಹಾಗೂ ಮಾಪಂಗಡ ಕವಿತಾ ಕರುಂಬಯ್ಯ ಅವರಿಗೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿತು.
ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 1150 ಮಕ್ಕಳು ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜಿಲ್ಲೆಯ ಮಡಿಕೇರಿ ಕೇಂದ್ರದಿಂದ ರಾಹುಲ್ ರಾಯ್ ಹಾಗೂ ಕಾರ್ತಿಕ್ ಕೆ.ಪಿ ಚಾಂಪಿಯನ್ ಪ್ರಶಸ್ತಿ, ರಿದಾ ಸುಮನ್, ಅಮೋಘ್ ಬಿ.ಪಿ, ರೋಷನ್ ಕೆ.ಆರ್, ಗಂಗಮ್ಮ ಎರ್ಲೀನ್, ಮಾನವಿ ಬಿ.ಎಮ್, ಸೋಹಾ ಫಾತಿಮ ಚಿನ್ನದ ಪದಕ ಹಾಗೂ ಮಾನ್ಯ ಟಿ.ಎಸ್, ಪೃಥ್ವಿರಾಜ್ ಎ ಬೆಳ್ಳಿಯ ಪದಕಗಳನ್ನು ಗೆದ್ದುಕೊಂಡರು.
ಬಹುಮಾನ ವಿತರಿಸಿ ಮಾತನಾಡಿದ ಹಿರಿಯ ವಿಜ್ಞಾನಿ ಡಾ.ರೊದ್ದಂ ನರಸಿಂಹ ಅವರು ಪೋಷಕರು ಮತ್ತು ಶಾಲೆಗಳು ಮಕ್ಕಳ ಆಸಕ್ತಿಯನ್ನು ಗುರುತಿಸಿ ಅವರಿಗೆ ನೆರವಾಗಬೇಕು. ಬ್ರೈನೋಬ್ರೈನ್ ನಂಥ ಕಾರ್ಯಕ್ರಮಗಳು ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು ಸಹಕಾರಿ ಎಂದರು.