ಅಕ್ರಮ ಮರಳನ್ನು ಸಾಗಾಣಿಕೆ ಮಾಡಿದ ಆರೋಪಿಗೆ ಜೈಲು ಶಿಕ್ಷೆ ಮತ್ತು ದಂಡ

Update: 2018-08-10 12:59 GMT

ಚಿಕ್ಕಮಗಳೂರು,ಆ.10: ಟ್ರಾಕ್ಟರ್ ಟ್ರೈಲರ್‍ನಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಕಳ್ಳತನ ಮಾಡಿದ ಆರೋಪಿಗೆ ನಗರದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

2016 ರ ಏಪ್ರಿಲ್ 25 ರಂದು ಆರೋಪಿ ಸೋಮು ಮಾಗಡಿ ಗ್ರಾಮದ ಸರ್ವೆ ನಂ:72ರ ಸರ್ಕಾರಿ ಕೆರೆಯಲ್ಲಿ ತನ್ನ ನಂ:ಕೆಎ:18-ಟಿಎ-7824-7825 ನ ಟ್ರಾಕ್ಟರ್ ಟ್ರೈಲರ್‍ನಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೆ ಹಾಸನ-ಚಿಕ್ಕಮಗಳೂರು ಹೆದ್ದಾರಿಯಲ್ಲಿರುವ ಬೈರಾಪುರ ಗೇಟ್ ಬಳಿ ಮರಳನ್ನು ಕಳ್ಳತನ ಮಾಡಿದ ಹಿನ್ನಲೆ ಚಿಕ್ಕಮಗಳೂರು ಗ್ರಾಮಾಂತರ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಎನ್.ಎಂ.ರಮೇಶ ರವರು ಆರೋಪಿ ಹೆಚ್.ಎಸ್.ಸೋಮಶೇಖರ್‍ನಿಗೆ 3 ವರ್ಷ ಜೈಲು ಶಿಕ್ಷೆ ಮತ್ತು 12,000 ರೂ.ದಂಡ ವಿಧಿಸಿ ತೀರ್ಪು ನೀಡಿದೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ರಾಘವೇಂದ್ರ ರಾಯ್ಕರ್ ವಾದ ಮಂಡಿಸಿರುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News