×
Ad

ಸರ್ಕಾರದ ಅನುದಾನಗಳನ್ನು ಸಮರ್ಪಕವಾಗಿ ಬಳಸಲು ಕ್ರಮಕೈಗೂಳ್ಳಿ : ಶಾಸಕ ಆರ್ ನರೇಂದ್ರರಾಜು

Update: 2018-08-10 21:35 IST

ಹನೂರು,ಆ.10 : ಪಟ್ಟಣದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳು ನಿಗದಿತ ಸಮಯದೂಳಗಡೆ ಪೂರ್ಣಗೂಳಿಸುವುದರ ಜೊತೆಗೆ ಸರ್ಕಾರದಿಂದ ಬಂದಂತಹ ಅನುದಾನಗಳನ್ನು ಸಮರ್ಪಕವಾಗಿ ಬಳಸಲು ಕ್ರಮಕೈಗೂಳ್ಳಿ ಎಂದು ಶಾಸಕ ಆರ್ ನರೇಂದ್ರರಾಜು ಗೌಡ ತಿಳಿಸಿದರು.

ಪಪಂ ಪಂಚಾಯತ್ ಕಾರ್ಯಾಲಯದಲ್ಲಿ ಪಪಂ ಅದ್ಯಕ್ಷೆ ಮಮತಾ ಮಹದೇವರವರ ಅಧ್ಯಕ್ಷೆತೆಯಲ್ಲಿ ಸಾಮಾನ್ಯ ಸಭೆಯನ್ನು ಆಯೋಜಿಸಿಲಾಗಿತ್ತು.

ಈ ಸಭೆಯಲ್ಲಿ ಪಾಲ್ಗೊಂಡ ಶಾಸಕರು, ಪಟ್ಟಣದ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗಳು ಕೈಗೆತ್ತಿಗೂಳ್ಳಲಾಗಿತ್ತು, ಅದು ಯಾವ ಹಂತದಲ್ಲಿದೆ. ಪೂರ್ಣವಾಗದೇ ಇದ್ದಲ್ಲಿ ನಿಗದಿತ ಸಮಯದಳೂಗಡೆ ಪೂರ್ಣಗೂಳಿಸಿ ಹಾಗೂ ಸರ್ಕಾರದಿಂದ ಬಂದತಃಹ ಅನುದಾನವನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪಿಸುವಂತಹ ಕೆಲಸವನ್ನು ಅಧಿಕಾರಿಗಳು ನಿರ್ವಹಿಸಬೇಕೆಂದರು.

ಪಟ್ಟಣ ಪಂಚಾಯತಿ ಕಚೇರಿಯನ್ನು ಸುಸಜ್ಜಿತವಾಗಿ ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣಮಾಡಲು ಉದ್ದೇಶಿಸಿರುವುದರಿಂದ  ಈ ಕಟ್ಟಡ ನಿರ್ಮಾಣ ಮಾಡಲು ಹಳೇ ಪಪಂ ಕಚೇರಿಯ ಬಳಿ ಇರುವ ನಿವೇಶನವನ್ನು ಗುರುತಿಸಲಾಗಿತ್ತು ಅದಲ್ಲದೇ ಈ ಕಟ್ಟಡ ನಿರ್ಮಾಣ ಮಾಡಲು 3.50ಕೋಟಿ ಅನುದಾನದವು ಸಹ ಈಗಾಗಲೇ ಬಿಡುಗಡೆಯಾಗಿದೆ, ಆದರೆ ಈ ನಿವೇಶನವನ್ನು ಕಂದಾಯ ಇಲಾಖೆಯ ಕಚೇರಿ ನಿರ್ಮಾಣ ಮಾಡಲು ಹಸ್ತಾಂತರ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಕಂದಾಯ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪಪಂ ಅದ್ಯಕ್ಷೆ ಮಮತಾ, ಉಪಾದ್ಯಕ್ಷ ಬಸವರಾಜು, ಮಾಜಿ ಅದ್ಯಕ್ಷರಾದ ರಾಜುಗೌಡ, ಬಾಲರಾಜ ನಾಯ್ಡು, ಸದಸ್ಯರು ಮತ್ತು ನಾಮನೀದೇರ್ಶಕ ಸದಸ್ಯರು ಸೇರಿದಂತೆ ಪಪಂ ಮುಖ್ಯಾಧಿಕಾರಿ ಎಸ್. ಡಿ ಮೋಹನ್ ಕೃಷ್ಣ , ಮತ್ತು ಅಧಿಕಾರಿ ವೃಂದ , ಕಚೇರಿ ಸಿಬ್ಬಂದಿಗಳು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News