×
Ad

ಶಿವಮೊಗ್ಗ: ನೇಣು ಬಿಗಿದು ವಿವಾಹಿತ ಆತ್ಮಹತ್ಯೆ

Update: 2018-08-11 22:43 IST

ಶಿವಮೊಗ್ಗ, ಆ. 11: ಮನೆಯಲ್ಲಿಯೇ ನೇಣು ಬಿಗಿದು ವಿವಾಹಿತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಸಾಗರ ಪಟ್ಟಣದ ಶ್ರೀಧರ ನಗರದಲ್ಲಿ ಶನಿವಾರ ನಡೆದಿದೆ. 

ಮೂಲತಃ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ನಿವಾಸಿಯಾದ ಮಂಜುನಾಥ್ (32) ಮೃತಪಟ್ಟ ವಿವಾಹಿತ ಎಂದು ಗುರುತಿಸಲಾಗಿದೆ. ಇವರಿಗೆ ಸಾಗರದ ಶೃತಿ ಎಂಬವರ ಜೊತೆ ಕಳೆದ ಮೂರು ವರ್ಷಗಳ ಹಿಂದಷ್ಟೆ ವಿವಾಹವಾಗಿದ್ದು, ಹಮಾಲಿ ಕೆಲಸ ಮಾಡುವ ಮೂಲಕ ಜೀವನ ನಿರ್ವಹಿಸುತ್ತಿದ್ದರು. 

ಮಂಜುನಾಥ್‍ರವರ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಮತ್ತೊಂದೆಡೆ ಮೃತನ ಕುಟುಂಬದವರು ಆತ್ಮಹತ್ಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತಂತೆ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News