ಮಂಡ್ಯ: ಬೈಕ್‍ನಿಂದ ಬಿದ್ದು ಮೃತ್ಯು

Update: 2018-08-12 16:19 GMT

ಮಂಡ್ಯ, ಆ.12: ಬೈಕ್‍ನಿಂದ ಆಯತಪ್ಪಿ ಕೆಳಗೆ ಬಿದ್ದ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಮಳವಳ್ಳಿ ತಾಲೂಕಿನ ಬೆಳಕವಾಡಿ ರಸ್ತೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಮಳವಳ್ಳಿ ತಾಲೂಕಿನ ವಾಸುಹಳ್ಳಿ ಗ್ರಾಮದ ನಾಗೇಂದ್ರ(25) ಮೃತಪಟ್ಟ ಯುವಕ. 

ನಾಗೇಂದ್ರ ಶನಿವಾರ ರಾತ್ರಿ ಎಲೆಕ್ಟ್ರಿಕಲ್ ಮೋಟಾರ್ ರಿವೇಂಡಿಗ್ ಕೆಲಸ ಮುಗಿಸಿ ಬೆಳಕವಾಡಿಯಿಂದ ತನ್ನ ಸ್ವಗ್ರಾಮ ವಾಸುಹಳ್ಳಿಗೆ  ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News