ಬಿಜೆಪಿಯವರು ಸುಳ್ಳುಗಳನ್ನು ಬಹುಬೇಗ ನಿಜವೆಂದು ನಂಬಿಸುತ್ತಾರೆ: ಮಾಜಿ ಸಚಿವ ಆಂಜನೇಯ

Update: 2018-08-12 16:57 GMT

ದಾವಣಗೆರೆ,ಆ.12: ಬಿಜೆಪಿಯವರು ಸಾಮಾಜಿಕ ಜಾಲತಾಣ ಪರಿಣಿತರಾಗಿದ್ದಾರೆ. ಸುಳ್ಳುಗಳನ್ನು ಬಹುಬೇಗ ನಿಜವೆಂದು ನಂಬಿಸುತ್ತಾರೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.  

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿರುವವರು ಸಾಮಾಜಿಕ ಜಾಲತಾಣ ನೋಡುವವರಲ್ಲ. ಅದರೆ ಬಿಜೆಪಿ ಇದಕ್ಕಾಗಿ ಕೋಟ್ಯಂತರ ಹಣ ವ್ಯಯ ಮಾಡುತ್ತಿದೆ. ಸುಳ್ಳನ್ನು ಅತೀವೇಗದಲ್ಲಿ ನಿಜವೆಂದು ನಂಬಿಸುತ್ತಾರೆ. ನಾವು ಅಂತವರಲ್ಲ, ಸತ್ಯವೇ ನಮ್ಮ ತಾಯಿ ತಂದೆ ಎಂದು ನಂಬಿದ್ದೇವೆ ಎಂದರು. 

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗುವುದು ಕಷ್ಟವಿತ್ತು. ಸುಪ್ರೀಂ ಕೋರ್ಟ್ ನೆರವಿಗೆ ಬಂದಿದ್ದರಿಂದ ಸರ್ಕಾರ ರಚನೆಯಾಗಿದೆ. ಬಹುಮತ ಸಾಬೀತಿಗೆ ಬಿಜೆಪಿಗೆ ರಾಜ್ಯಪಾಲರು 15 ದಿನ ಅವಕಾಶ ನೀಡಿದರು. ಅಷ್ಟು ದಿನ ಬಿಜೆಪಿಗೆ ಸಿಕ್ಕಿದ್ದರೆ ಅವರು ಬಿಡುತ್ತಿರಲಿಲ್ಲ. ಅಪರೇಷನ್ ಕಮಲ ನಡೆಸುತ್ತಿದ್ದರು. ನಾವು ಸುಪ್ರೀಂ ಕೋರ್ಟ್ ಗೆ ಕೃತಜ್ಞತೆರಾಗಬೇಕು. ಇಬ್ಬರು ಮೈತ್ರಿ ಧರ್ಮ ಪಾಲಿಸಿಕೊಂಡು ಹೋಗಬೇಕು ಎಂದು ಹೇಳಿದರು. 

ಮೈತ್ರಿ ಸರ್ಕಾರದ ಬಗ್ಗೆ ಬಿಜೆಪಿಯ ಈಶ್ವರಪ್ಪ ಟೀಕೆ ವಿಚಾರದ ಬಗ್ಗೆ ಮಾತನಾಡಿದ ಮಾಜಿ ಸಚಿವ ಆಂಜನೇಯ, ಈಶ್ವರಪ್ಪನದ್ದು ಮಾಧ್ಯಮದಲ್ಲಿ ಮಿಂಚುವ ಖಯಾಲಿ. ಏನು ಟೀಕೆ ಮಾಡಿದರೆ ಸುದ್ದಿಯಾಗುತ್ತೇನೆಂದು ಅವರಿಗೆ ಗೊತ್ತು. ಹಾಗಾಗಿ ಹೈಲೈಟ್ ಆಗಲು ಈಶ್ವರಪ್ಪ ಟೀಕೆ ಮಾಡುತ್ತಾರೆ. ಅವರ ಮಾತಿಗೆ ಬೆಲೆ ಕೊಡಬೇಕಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News