ಬಿಜೆಪಿ ನಾಯಕರು ಅಖಂಡ ರಾಜ್ಯವನ್ನು ಒಡೆಯಲು ಯತ್ನಿಸುತ್ತಿದ್ದಾರೆ: ಸಚಿವ ಬಂಡೆಪ್ಪ ಕಾಶೆಂಪುರ್

Update: 2018-08-12 17:01 GMT

ದಾವಣಗೆರೆ,ಆ.12: ಬಿಜೆಪಿಯ ಕೆಲವು ನಾಯಕರು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಎಂದು ಹೇಳಿ ಅಖಂಡ ರಾಜ್ಯವನ್ನು ಒಡೆಯಲು ಯತ್ನಿಸುತ್ತಿದ್ದು, ನಮ್ಮ ಸಮ್ಮಿಶ್ರ ಸರ್ಕಾರ ಅಖಂಡ ಕರ್ನಾಟಕ ಒಡೆಯಲು ಬಿಡುವುದಿಲ್ಲ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ಹೇಳಿದರು. 

ಜೆಡಿಎಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿ, ನಾಯಕರಾದ ಹೆಚ್.ಡಿ. ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದಾಗ ಅಪ್ಪರ್ ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ಹುಬ್ಬಳ್ಳಿಯ ಈದ್ಗಾ ಮೈದಾನದ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಉತ್ತರ ಕರ್ನಾಟಕಕ್ಕೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ ಎಂದ ಅವರು, ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾದ ಮೇಲೆ ರಾಜ್ಯದ ರೈತರ 40 ಸಾವಿರ ಕೋಟಿ ರೂ. ಗಳಿಂತಲೂ ಹೆಚ್ಚು ರಾಷ್ಟ್ರೀಕೃತ ಬ್ಯಾಂಕುಗಳ ಹಾಗೂ ಸಹಕಾರಿ ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಿದ್ದಾರೆ. ರೈತರ ಮನೆ ಬಾಗಿಲುಗಳಿಗೆ ಋಣಮುಕ್ತ ಪತ್ರವನ್ನು ಕೊಡುತ್ತೇವೆ ಎಂದರು.

ಜನತಾದಳ(ಜಾ) ಪಕ್ಷವನ್ನು ಬೇರು ಮಟ್ಟದಿಂದ ಬೆಳೆಸಿದ ಕೀರ್ತಿ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಸಲ್ಲುತ್ತದೆ. ಈ ಪಕ್ಷಕ್ಕೆ ಪಕ್ಷದ ಕಾರ್ಯಕರ್ತರುಗಳೇ ಆಧಾರಸ್ತಂಭ ಎಂದು ಬಣ್ಣಿಸಿದ ಅವರು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ದಾವಣಗೆರೆ ಜಿಲ್ಲೆಯಲ್ಲಿ ಜೆಡಿಎಸ್ ಬಲಗೊಳಿಸಬೇಕು ಎಂದರು. 

ಈ ಸಂದರ್ಭ ಸಚಿವ ಬಂಡೆಪ್ಪ ಕಾಶೆಂಪೂರ್ ಅವರಿಗೆ ದಾವಣಗೆರೆ ಜಿಲ್ಲಾ ಜೆಡಿಎಸ್ ವತಿಯಿಂದ ಸನ್ಮಾನಿಸಲಾಯಿತು. ಜೆಡಿಎಸ್ ಜಿಲ್ಲಾಧ್ಯ್ಯಕ್ಷ ಬಿ. ಚಿದಾನಂದಪ್ಪ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಪ. ಪಂಗಡದ ಅಧ್ಯಕ್ಷ ಹೊದಿಗೆರೆ ರಮೇಶ್, ಕಾರ್ಯಾಧ್ಯಕ್ಷ ಟಿ. ಗಣೇಶ್ ದಾಸಕರಿಯಪ್ಪ, ಉಪಾಧ್ಯಕ್ಷ ಪರಮೇಶಪ್ಪ, ಎಸ್.ಸಿ. ಘಟಕದ ಅಧ್ಯಕ್ಷ ಕಡತಿ ಅಂಜಿನಪ್ಪ, ಜೊಳ್ಳಿ ರಾಮಣ್ಣ, ಎ.ವೈ. ಕೃಷ್ಣಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಪಾಪಣ್ಣ, ರಾಜ್ಯ ಕಾರ್ಯದರ್ಶಿಗಳಾದ ಟಿ. ಅಜ್ಗರ್, ದಾವಣಗೆರೆ ಉತ್ತರ ವಲಯದ ಅಧ್ಯಕ್ಷ ಜೆ. ಅಮಾನುಲ್ಲಾಖಾನ್, ಜಿಲ್ಲಾ ಜನತಾದಳದ ಪ್ರಧಾನ ಕಾರ್ಯದರ್ಶಿ ಬಾತಿ ಶಂಕರ್, ಬಿ. ದಾದಾಪೀರ್, ಗೋಣಿವಾಡ ಮಂಜುನಾಥ್, ವೆಂಕಟೇಶ್, ಅಲಿಖಾನ್, ಶೀಲಾ ಕುಮಾರ್, ಎಂ. ಅಂಜಿನಪ್ಪ, ಸಂಗನಗೌಡ, ಮಹಿಳಾ ಉಪಾಧ್ಯಕ್ಷರಾದ ಶ್ರೀಮತಿ ವನಜಾಕ್ಷಮ್ಮ, ಎಸ್. ಮಹಾದೇವ್‍ನಾಯಕ, ಯೋಗೀಶ್, ಹೂವಿನಮಡು ಚಂದ್ರಪ್ಪ, ಪೇಪರ್ ಚಂದ್ರಣ್ಣ, ಫಕೃದ್ಧೀನ್, ಎ.ಕೆ. ನಾಗಪ್ಪ, ಕೆ.ಎಂ. ಅಂಜಿನಪ್ಪ, ದುರುಗೋಜಿರಾವ್, ಕುಂದುವಾಡ ಬಸವರಾಜಪ್ಪ, ಬಾತಿ ಶ್ರೀನಿವಾಸ್, ಮಂಜುನಾಥ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News