ಅನಸ್ತೇಷಿಯಾ ವೈದ್ಯರ ಪ್ರಾಮುಖ್ಯತೆ ಇಂದು ಹೆಚ್ಚಾಗಿದೆ: ಶಾಮನೂರು ಶಿವಶಂಕರಪ್ಪ

Update: 2018-08-12 17:04 GMT

ದಾವಣಗೆರೆ,ಆ.12: ಅನಸ್ತೇಷಿಯಾ ವೈದ್ಯರಿಲ್ಲದೇ, ಶಸ್ತ್ರ ಚಿಕಿತ್ಸೆ ನಡೆಯುವುದೇ ಇಲ್ಲ. ಹಾಗಾಗಿ, ಅನಸ್ತೇಷಿಯಾ ವೈದ್ಯರ ಪ್ರಾಮುಖ್ಯತೆ ಹಿಂದೆಂಗಿಂತಲೂ ಇಂದು ಹೆಚ್ಚಾಗಿದೆ, ಅನಿವಾರ್ಯವೂ ಆಗಿದೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು. 

ನಗರದ ಬಾಪೂಜಿ ಸಭಾಂಗಣದಲ್ಲಿ ಇಂಡಿಯನ್ ಸೊಸೈಟಿ ಆಫ್ ಅನಸ್ತೀಶಿಯಾಲಜಿಸ್ಟ್ (ಐಎಸ್‍ಎ) ಜಿಲ್ಲಾ ಶಾಖೆ, ಜೆಜೆಎಂ ಮೆಡಿಕಲ್ ಕಾಲೇಜಿನ ಅರವಳಿಕೆ ಹಾಗೂ ಆಪತ್ತು ನಿರ್ವಹಣಾ ವಿಭಾಗ ಮತ್ತು ಎಸ್‍ಎಸ್‍ ವೈದ್ಯಕೀಯ ಕಾಲೇಜು ಸಹಯೋಗದಲ್ಲಿ 34ನೇ ಅರವಳಿಕೆ ತಜ್ಞರ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸಾಮಾನ್ಯವಾಗಿ ಅನಸ್ತೇಷಿಯಾ ವೈದ್ಯರಿಲ್ಲದೆ ಶಸಚಿಕಿತ್ಸಾ ವೈದ್ಯರು ಎಷ್ಟೇ ಬುದ್ಧಿವಂತರಾಗಿದ್ದರೂ ಪ್ರಯೋಜನಕ್ಕೆ ಬರುವುದಿಲ್ಲ. ಅನಸ್ತೇಷಿಯಾ ವೈದ್ಯರು ಬಂದ ನಂತರವೇ ಶಸ್ತ್ರಚಿಕಿತ್ಸೆ ನಡೆಯಬೇಕು. ಈ ಹಿನ್ನೆಲೆಯಲ್ಲಿ ಅತ್ಯುತ್ತಮ ಪರಿಣಿತಿ ಸಾಧಿಸಿ, ಜಗತ್ತಿನೆಲ್ಲೆಡೆ ಕಂಡು ಬರುತ್ತಿರುವ ಹೊಸ ಸಂಶೋಧನೆ, ಆವಿಷ್ಕಾರಗಳನ್ನು ನಮ್ಮ ವೈದ್ಯರು ಅಳವಡಿಸಿಕೊಂಡು, ರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ನೀಡಬೇಕು ಎಂದರು. 

ಹಿಂದೆಲ್ಲಾ ಅನಸ್ತೇಷಿಯಾ ವೈದ್ಯರ ದಿನಾಂಕ ನಿಗದಿಯಾದ ನಂತರವೇ ಶಸಚಿಕಿತ್ಸೆಯ ದಿನಾಂಕ ನಿರ್ಧರಿಸಲಾಗುತ್ತಿತ್ತು. ಈಗ ಅನಸ್ತೇಷಿಯಾ ವೈದ್ಯರು ಸಾಕಷ್ಟು ಸಂಖ್ಯೆಯಲ್ಲಿದ್ದು, ಆ ವಿಭಾಗಕ್ಕೆ ಒಳ್ಳೆಯ ಬೇಡಿಕೆಯೂ ಬಂದಿದೆ. ಅಲ್ಲದೇ, ಹೊಸ ತಂತ್ರಜ್ಞಾನ, ಸಂಶೋಧನೆಗಳೂ ಅನಸ್ತೇಷಿಯಾ ವೈದ್ಯರಿಗೆ, ತಜ್ಞರಿಗೆ ವರದಾನವಾಗಿದೆ. ಯಾವುದೇ ಕಾರಣಕ್ಕೂ ವೈದ್ಯಕೀಯ ಕ್ಷೇತ್ರದಲ್ಲಿ ಅನಸ್ತೇಷಿಯಾ ಕ್ಷೇತ್ರವನ್ನು ಯಾರೂ ಕಡೆಗಣಿಸುವಂತಿಲ್ಲ ಎಂದು ಅವರು ತಿಳಿಸಿದರು.

ಇಂತಹ ಸಮ್ಮೇಳನಗಳು ಆಗಾಗ್ಗೆ ನಡೆಯುತ್ತಿರಬೇಕು. ರಾಜ್ಯದ ವಿವಿಧೆಡೆಯಿಂದ ಬರುವ ಪ್ರತಿಭಾವಂತ, ಪರಿಣಿತ ವೈದ್ಯರಿಂದ ಪರಸ್ಪರ ವಿಚಾರ ವಿನಿಮಯವಾದಲ್ಲಿ ಅನಸ್ತೇಷಿಯಾ ಕ್ಷೇತ್ರವು ಮತ್ತಷ್ಟು ಪರಿಣಾಮಕಾರಿಯಾಗಿ ಬೆಳೆಯುತ್ತದೆ. ಅರವಳಿಕೆ ವೈದ್ಯರು, ತಜ್ಞರಿಗೂ ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. 

ಅನಸ್ತೇಷಿಯಾ ತಜ್ಞ ವೈದ್ಯರ ಸಂಘದ ಅಧ್ಯಕ್ಷ ಡಾ.ಶ್ರೀನಿವಾಸಲು ಅಧ್ಯಕ್ಷತೆ ವಹಿಸಿದ್ದರು., ರಾಷ್ಟ್ರೀಯ ಅಧ್ಯಕ್ಷ ಡಾ. ಬಾಲಭಾಸ್ಕರ, ಕಾರ್ಯದರ್ಶಿ ಡಾ.ವೆಂಕಟಗಿರಿ ಮಾತನಾಡಿದರು. ಡಾ.ಡಿ.ಮಲ್ಲಿಕಾರ್ಜುನಪ್ಪ ಅವರಿಗೆ ಜೀವಮಾನ ಶ್ರೇಷ್ಟ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಶಿಲ್ಪಶ್ರೀ ಸಂಪಾದಕತ್ವದ ಸ್ಮರಣ ಸಂಚಿಕೆಯನ್ನು ಡಾ.ಶಾಮನೂರು ಶಿವಶಂಕರಪ್ಪ ಬಿಡುಗಡೆ ಮಾಡಿದರು.

ಜೆಜೆಎಂ ವೈದ್ಯಕೀಯ ಕಾಲೇಜು ಪ್ರಾರ್ಚಾ ಡಾ.ಎಸ್.ಬಿ.ಮುರುಗೇಶ, ಎಸ್ಸೆಸ್ ವೈದ್ಯ ಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಪ್ರಾಚಾರ್ಯ ಡಾ.ಬಿ.ಎಸ್. ಪ್ರಸಾದ, ಸಮ್ಮೇಳನ ಸಮಿತಿ ಅಧ್ಯಕ್ಷರಾದ ಡಾ.ಆರ್.ರವಿ, ಡಾ.ಅರುಣಕುಮಾರ, ಕಾರ್ಯದರ್ಶಿ ಡಾ.ಬಿ.ಜಿ. ಪ್ರಭು, ಡಾ. ಅಶೋಕ, ಡಾ.ಅರುಣ, ಡಾ.ಬಿ.ಜಿ.ಪ್ರಭು, ಡಾ.ರವಿಶಂಕರ, ಡಾ.ಕೆ.ಪಿ ಶಿವಕುಮಾರ, ಡಾ.ಕೆ.ಜಿ. ಸಂತೋಷ ಇದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News