ಜೀವ ರಕ್ಷಕ ‘ಕನ್ಹಯ್ಯ’

Update: 2018-08-12 18:23 GMT

ಇಡುಕ್ಕಿಯಲ್ಲಿ ಮುಳುಗುತ್ತಿದ್ದ ಸೇತುವೆಯಿಂದ ಮಗುವೊಂದನ್ನು ಎನ್‌ಡಿಆರ್‌ಎಫ್‌ನ ಕಾನ್ಸ್ ಟೆಬಲ್ ಓರ್ವ ಜೀವದ ಹಂಗು ತೊರೆದು ರಕ್ಷಿಸಿ ಕೇರಳಿಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹರಿಯುತ್ತಿರುವ ನೀರಿನ ರಭಸಕ್ಕೆ ಸೇತುವೆ ಮುಳುಗುವುದರಲ್ಲಿತ್ತು. ಆಚೆ ದಡದಲ್ಲಿ ತಂದೆ ಹಾಗೂ ಮಗು ರಕ್ಷಣೆಗಾಗಿ ಕಾದಿದ್ದರು. ಇದನ್ನು ಗಮನಿಸಿದ ಎನ್‌ಡಿಆರ್‌ಎಫ್‌ನ ಕಾನ್ಸ್‌ಟೆಬಲ್, ಬಿಹಾರದ ಕನ್ಹಯ್ಯ್ ಕುಮಾರ್ ಜೀವದ ಹಂಗು ತೊರೆದು ಓಡಿ ಹೋಗಿ ಮಗುವನ್ನು ಎತ್ತಿಕೊಂಡು ಬಂದಿದ್ದಾರೆ. ಹಿಂದಿನಿಂದ ಮಗುವಿನ ತಂದೆ ಕೂಡ ಓಡಿ ಬಂದಿದ್ದಾರೆ ಕನ್ಹಯ್ಯಾ ಕುಮಾರ್ ಅವರ ಕಾರ್ಯ ಎಲ್ಲರ ಶ್ಲಾಘನೆಗೆ ಕಾರಣವಾಗಿದೆ. ಅವರು ಸೇತುವೆ ದಾಟಿದ ಕೆಲವೇ ನಿಮಿಷಗಳ ಬಳಿಕ ಸೇತುವೆ ಕುಸಿದಿದೆ. ಜಲಾಶಯದ ಐದು ಗೇಟುಗಳನ್ನು ಮೊದಲ ಬಾರಿಗೆ ಕೆಲವು ದಿನಗಳ ಹಿಂದೆ ತೆರೆಯಲಾದ ಇಡುಕ್ಕಿ ಜಿಲ್ಲೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor