ವಲಸೆ ಹಕ್ಕಿಗಳು...

Update: 2018-08-12 18:27 GMT

ರಾಜಸ್ಥಾನದ ಜೈಪುರದಿಂದ 75ಕಿ.ಮೀ ದೂರದಲ್ಲಿರುವ ಸಂಬಾರ್ ಉಪ್ಪು ಸರೋವರದ ಸಮೀಪ ಫ್ಲೆಮಿಂಗೊ ಹಕ್ಕಿಗಳ ಗುಂಪು ಕಾಣಿಸಿಕೊಂಡಿತು. ಪ್ರತಿವರ್ಷ ಜುಲೈ ತಿಂಗಳಲ್ಲಿ ಭಾರತದ ಒಳನಾಡಿನಲ್ಲಿರುವ ಅತ್ಯಂತ ದೊಡ್ಡ ಉಪ್ಪು ನೀರಿನ ಪ್ರದೇಶಕ್ಕೆ ಸಾವಿರಾರು ಫ್ಲೆಮಿಂಗೊಗಳು ವಲಸೆ ಬರುತ್ತವೆ. ಈ ಪರಿಸರದಲ್ಲಿ ಅಕ್ರಮ ಉಪ್ಪು ತಯಾರಿಕಾ ಘಟಕಗಳಿಂದ ಉಂಟಾಗಿರುವ ಮಾಲಿನ್ಯದ ಪರಿಣಾಮವಾಗಿ ಕಳೆದ ಕೆಲವು ದಶಕಗಳಿಂದ ಇಲ್ಲಿಗೆ ಆಗಮಿಸುವ ಫ್ಲೆಮಿಂಗೊಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor