×
Ad

ಹನೂರು: ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ

Update: 2018-08-13 21:59 IST

ಹನೂರು,ಆ.13: ನರೇಗಾ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಇದು ಗ್ರಾಮಾಂತರ ಪ್ರದೇಶಗಳಲ್ಲಿ  ಅತ್ಯಂತ ಕೆಳ ಮಟ್ಟದಲ್ಲಿರುವ ಬಡವರನ್ನು ಅಭಿವೃದ್ದಿಯತ್ತ ಕೊಂಡುಹೋಗಲು ಒಂದು ಸೂಕ್ತ ಮಾರ್ಗ ಸೂಚಿಯಾಗಿದೆ ಎಂದು ಜಾನಪೌಲ್ ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯ ಶಾಗ್ಯ ಗ್ರಾಮ ಪಂ.ನಲ್ಲಿ 2017-2018ಸಾಲಿನ ಮೊದಲನೇ ಹಂತದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋದನೆ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನರೇಗಾ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಇದರಲ್ಲಿ ಪ್ರತಿ ಕುಟುಂಬವೂ ಉದ್ಯೋಗ ಪಡೆಯುವುದರ ಮೂಲಕ ಕೂಲಿ ಪಡೆಯಬಹುದಾಗಿದೆ. ಈ ಯೋಜನೆಯಡಿಯಲ್ಲಿ ಕೃಷಿ ಹೊಂಡ ನಿರ್ಮಾಣ, ದನದ ಕೊಟ್ಟಿಗೆ, ಜಮೀನು ರಸ್ತೆ ಅಭಿವೃದ್ಧಿ ಸೇರಿದಂತೆ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನೂಡಲ್ ಅಧಿಕಾರಿ ಜಡೇಸ್ವಾಮಿ, ಗ್ರಾಪಂ ಸದಸ್ಯ ಬ್ಲೋರಿಯಾ ಎಲಿಜೆಬತ್, ರಾಣಿ ಮಹದೇವಿ, ಮಣಿಮಾಯಕ, ಸಿದ್ದಸ್ವಾಮಿ, ಮಂಠ್ಯ, ಮಾದೇಶ ಸಾವಿತ್ರಮ್ಮ, ಪಿಡಿಒ ರಾಮು ತಾಲೂಕು ಸಂಯೋಜಕ ಮನೋಹರ್, ರೈತ ಮುಖಂಡ ಕೃಷ್ಣ, ಕರವಸೂಲಿಗಾರ ಶಿವಲಂಕರಪ್ಪ, ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News