ಹನೂರು: ನಿವೇಶನ ರಹಿತ ಕುಟುಂಬಗಳ ಸಮೀಕ್ಷಾ ಪಟ್ಟಿ ಅನುಮೋದನಾ ವಿಶೇಷ ಗ್ರಾಮ ಸಭೆ
ಹನೂರು,ಆ.13: ಮನೆ ಹಾಗೂ ನಿವೇಶನ ಕೋರಿ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಇನ್ನೂ 10 ದಿನ ಹೆಚ್ಚುವರಿ ಕಾಲಾವಕಾಶ ನೀಡಿದ್ದು, ಅವಶ್ಯಕತೆಯುಳ್ಳ ಫಲಾನುಭವಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಪಿಡಿಒ ರಾಜೇಶ್ ತಿಳಿಸಿದರು.
ತಾಲೂಕಿನ ಕೌದಳ್ಳಿ ಜಿ.ಪಂ. ವ್ಯಾಪ್ತಿ ಕುರಟ್ಟಿ ಹೊಸೂರು ಗ್ರಾ.ಪಂ. ಮಾರಮ್ಮನ ದೇವಸ್ಥಾನ ಆವರಣದಲ್ಲಿ ನಡೆದ 2018-19ನೇ ಸಾಲಿನ ವಸತಿ ಮತ್ತು ನಿವೇಶನ ರಹಿತ ಕುಟುಂಬಗಳ ಸಮೀಕ್ಷಾ ಪಟ್ಟಿ ಅನುಮೋದನೆಯ ವಿಶೇಷ ಗ್ರಾಮ ಸಭೆ ಹಾಗೂ ಸ್ವಚ್ಚ ಸರ್ವೆಕ್ಷಣ ಗ್ರಾಮೀಣ 2018 ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗಾಗಲೇ ಕುರಟ್ಟಿ ಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ವಸತಿ ಮತ್ತು ನಿವೇಶನ ರಹಿತ ಒಟ್ಟು 550 ಮಂದಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ವಸತಿಗಾಗಿ 498 ಫಲಾನುಭವಿಗಳು ಮತ್ತು ನಿವೇಶನ ರಹಿತ 52 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸರ್ಕಾರ ಈ ಅವಧಿಯನ್ನು ಇನ್ನೂ 10 ದಿನ ಕಾಲ ಹೆಚ್ಚಿಸಿದ್ದು, ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು
ಗ್ರಾ.ಪಂ. ಅಧ್ಯಕ್ಷ ಮುನಿಸಿದ್ದ, ಉಪಾಧ್ಯಕ್ಷೆ ಹಂಸಲೇಖ, ತಾ.ಪಂ. ಸದಸ್ಯ ಸಣ್ಣಕಾಳಶೆಟ್ಟಿ, ನೋಡೆಲ್ ಅಧಿಕಾರಿ ರಾಜೇಶ್, ಸದಸ್ಯರಾದ ಚಿಕ್ಕತಾಯಮ್ಮ, ಮಹದೇವಪ್ಪ, ರವಿ, ಕರವಸೂಲಿ ಬಸವರಾಜು, ಕಂಫೂಟರ್ ಚಾಲಿತ ಪುಟ್ಟಮಾದಶೆಟ್ಟಿ ಇನ್ನಿತರರು ಹಾಜರಿದ್ದರು.