×
Ad

ಹನೂರು: ಉದ್ಯಮಶೀಲತಾ ಅರಿವು ಕಾರ್ಯಕ್ರಮ

Update: 2018-08-13 22:07 IST

ಹನೂರು,ಆ.13: ಗಿರಿಜನರ ಅಭಿವೃದ್ದಿಗೆ ಸರ್ಕಾರ ಹಲವಾರು ಸೌಲಭ್ಯಗಳನ್ನು ಒದಗಿಸಿದ್ದು, ಅದರಂತೆ ಯುವಕರಿಗೆ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಿ ಸ್ವಯಂ ಉದ್ಯೋಗದತ್ತ ಮುಖಮಾಡುವಂತೆ ಮಾಡಲು ಉದ್ಯಮಾ ಶೀಲತಾ ಅರಿವಿನ ಕಾರ್ಯಕ್ರಮ ಮತ್ತು ತರಬೇತಿ ನೊಂದಣಿ ಶಿಬಿರವನ್ನು ಸಹ ಆಯೋಜಿಸಿದೆ ಎಂದು ಜಿಲ್ಲಾ ಸೋಲಿಗ ಅಭಿವೃದ್ದಿ ಸಂಘದ ಕಾರ್ಯದರ್ಶಿ ಸಿ. ಮಹದೇವ್ ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯ ಒಡೆಯರಪಾಳ್ಯದ ಗಿರಿಜನರ ವಸತಿ ನಿಲಯದಲ್ಲಿ  ಜಿಲ್ಲಾ ಪಂಚಾಯತ್ ಚಾಮರಾಜನಗರ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜೆಎಸ್‍ಎಸ್ ರುಡ್‍ಸೆಟ್ ಸಂಸ್ಥೆ ಮರಿಯಾಲ ಮತ್ತು ಬುಡಕಟ್ಟು ಅಭಿವೃದ್ದಿ ಸಂಘ ಇದರ ಸಂಯುಕ್ತಾಶ್ರಯದಲ್ಲಿ ಉದ್ಯಮಾಶೀಲತಾ ಅರಿವಿನ ಕಾರ್ಯಕ್ರಮ ಮತ್ತು ತರಬೇತಿ ನೊಂದಣಿ ಶಿಬಿರ ಕಾರ್ಯಕ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾ ವ್ಯಾಪ್ತಿಯಲ್ಲಿ ವಾಸವಿರುವ ಸೋಲಿಗ, ಕಾಡುಕುರಬ , ಜೇನುಕುರಬ ಡೋಂಗ್ರಿರೇಸಿಯಾ ಜನಾಂಗದದಲ್ಲಿ ಒಟ್ಟು 460 ಮಂದಿ ವಿದ್ಯಾರ್ಥಿಗಳು ಪಿಯುಸಿ, ಪದವಿ ಜೊತೆಗೆ ಇನ್ನಿತರರ ವಿಷಯಗಳಲ್ಲಿ ವ್ಯಾಸಂಗ ಮಾಡಿಯೂ ಪ್ರಸ್ತುತ ದಿನಗಳಲ್ಲಿ ನಿರುದ್ಯೋಗಿಗಳಾಗಿದ್ದಾರೆ. ಈ ಯುವಕರು ಒಂದು ಉದ್ಯೋಗವನ್ನು ಹುಡುಕುವ ಮೊದಲು ತಾನು ಯಾವ ಕೌಶಲ್ಯವನ್ನು ಪಡೆದಿರುವೆ ಎಂಬುವುದನ್ನು ಅವಲೋಕಿಸಿ, ಸ್ವಯಂ ಉದ್ಯೂಗದತ್ತ ಮುಖಮಾಡುವ ನಿಟ್ಟಿನಲ್ಲಿ ಇಲಾಖೆಯಿಂದ ಉದ್ಯೋಗದಾರಿತ ಕೌಶಲ್ಯ ಶಿಬಿರಗಳನ್ನು  ಆಯೋಜಿಸಲಾಗುತ್ತದೆ. ಉದ್ಯಮಶೀಲರು ಕೌಶಲ್ಯಾಧಾರಿತ ತರಬೇತಿ ಪಡೆದು ಉದ್ಯಮಶೀಲರಾಗಬೇಕು ಎಂದು ಸಲಹೆ ನೀಡಿದರು.

ಈ ಸಂಧರ್ಭದಲ್ಲಿ ಜಿಲ್ಲಾ ವಿಸ್ತಾರಣಾಧಿಕಾರಿಗಳಾದ ಬಸವಣ್ಣ, ಚಿನ್ನಸ್ವಾಮಿ, ಚಂದ್ರಶೇಖರ್, ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News