ಮಂಡ್ಯ: ಕೂಲಿಕಾರರ ಒಕ್ಕಲೆಬ್ಬಿಸುವ ಯತ್ನ ಖಂಡಿಸಿ ಪ್ರತಿಭಟನೆ

Update: 2018-08-13 17:16 GMT

ಮಂಡ್ಯ, ಆ.13: ಏಕಾಏಕಿ ಪೊಲೀಸರ ಮೂಲಕ ಕೂಲಿಕಾರರನ್ನು ಒಕ್ಕಲೆಬ್ಬಿಸುತ್ತಿರುವ ಕ್ರಮ ಖಂಡಿಸಿ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳು ಹಾಗೂ ಕರಡಕೆರೆ ಗ್ರಾಮಸ್ಥರು ಸೋಮವಾರ ಮದ್ದೂರು ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ತಮ್ಮ ದಿನನಿತ್ಯದ ದಿನಸಿ ಪದಾರ್ಥಗಳು, ಮೇಕೆ, ಕುರಿ, ಕೋಳಿ ಹಾಗೂ ಪಾತ್ರೆಯೊಂದಿಗೆ ಆಗಮಿಸಿ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಕರಡಕೆರೆ ಗ್ರಾಮದ 10 ಕೂಲಿಕಾರರ ಕುಟುಂಬಗಳು ಕಳೆದ 40 ವರ್ಷಗಳಿಂದಲೂ ಸರ್ವೆ.ನಂ-188/1ರಲ್ಲಿ ವಾಸಿಸುತ್ತಿದ್ದು ಕೆಲ ಖಾಸಗಿ ವ್ಯಕ್ತಿಗಳು ಕೂಲಿಕರರನ್ನು ಒಕ್ಕಲೆಬ್ಬಿಸಿ ವಾಸವಿರುವ ಮನೆಯನ್ನು ನೆಲಸಮ ಮಾಡಲು ಮುಂದಾಗಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಿದರು. 

ಬಿ.ಹನುಮೇಶ್, ಯಶವಂತ್, ರಾಮಚಂದ್ರು, ಬಿ.ಪಿ. ಮಂಜುಳಾ, ತಿಮ್ಮಯ್ಯ, ತಿಮ್ಮಮ್ಮ, ಕರಗಮ್ಮ, ಚನ್ನಾಚಾರಿ, ಇತರರು ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News