ಲಂಡನ್ ಸಂಸತ್ತಿನ ಹೊರಗೆ ಬ್ಯಾರಿಕೇಡ್‌ಗೆ ಕಾರು ಢಿಕ್ಕಿ: ಹಲವು ಮಂದಿಗೆ ಗಾಯ

Update: 2018-08-14 09:03 GMT

ಲಂಡನ್, ಆ.14: ಲಂಡನ್ ಸಂಸತ್ ಕಟ್ಟಡದ ಹೊರಗಿನ ಬ್ಯಾರಿಕೇಡ್‌ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಹಲವು ಮಂದಿಗೆ ಗಾಯವಾಗಿದೆ. ಮಂಗಳವಾರ ಬೆಳಗ್ಗೆ ನಡೆದ ಈ ಘಟನೆಗೆ ಸಂಬಂಧಿಸಿ ಕಾರು ಚಾಲಕನನ್ನು ಲಂಡನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂಸತ್ತಿನ ಹೊರಗೆ ಸಂಭವಿಸಿರುವ ಕಾರು ಢಿಕ್ಕಿ ಘಟನೆಗೂ-ಭಯೋತ್ಪಾದನೆ ಕೃತ್ಯಕ್ಕೂ ಸಂಬಂಧವಿದೆಯೇ ಎಂದು ತಕ್ಷಣಕ್ಕೆ ದೃಢಪಟ್ಟಿಲ್ಲ. ಪುರುಷ ಕಾರು ಚಾಲಕನನ್ನು ಪೊಲೀಸರು ತಕ್ಷಣವೇ ತಮ್ಮ ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.

 ಸಾಮಾಜಿಕ ಜಾಲತಾಣದಲ್ಲಿನ ಫುಟೇಜ್‌ನಲ್ಲಿ ಶಸ್ತ್ರ ಸಜ್ಜಿತರಾಗಿದ್ದ ಪೊಲೀಸರು ಘಟನಾ ಸ್ಥಳದಿಂದ ವ್ಯಕ್ತಿಯೊಬ್ಬನನ್ನು ಹಿಡಿದುಕೊಂಡು ಹೋಗುತ್ತಿರುವುದು ಸೆರೆಯಾಗಿದೆ. ಘಟನೆಯ ಬಳಿಕ ಸೆಂಟ್ರಲ್ ಲಂಡನ್‌ನಲ್ಲಿರುವ ಪಾರ್ಲಿಮೆಂಟ್ ಬಿಲ್ಡಿಂಗ್‌ನ ಸುತ್ತಮುತ್ತ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News