ರಾಷ್ಟ್ರಪತಿ ಪದಕಕ್ಕೆ ರಾಜ್ಯದ 18 ಮಂದಿ ಪೊಲೀಸರು ಆಯ್ಕೆ

Update: 2018-08-14 14:09 GMT

ಬೆಂಗಳೂರು, ಆ.14: ದೇಶದ 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಪೊಲೀಸರ ಅತ್ಯುತ್ತಮ ಸೇವೆಯನ್ನು ಪ್ರಶಂಸಿಸಿ ಪ್ರದಾನಿಸುವ ರಾಷ್ಟ್ರಪತಿ ಪದಕಕ್ಕೆ ರಾಜ್ಯದ 18 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಜನರಾಗಿದ್ದಾರೆ. 

ಪ್ರಸಕ್ತ ವರ್ಷದಲ್ಲಿ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿವರ:  ಟಿ.ಸುಂದರಕುಮಾರ್-ಡಿವೈಎಸ್‌ಪಿ, ಕೆಎಸ್‌ಆರ್‌ಪಿ (ತುಮಕೂರು) ಎಂ.ಎನ್.ಕರಿಬಸನಗೌಡ-ಎಸಿಪಿ(ಬೆಂಗಳೂರು) ಸಿ. ಗೋಪಾಲ್- ಎಸಿಪಿ (ಮೈಸೂರು).

ಕೆ.ಪುರುಷೋತ್ತಮ್-ಡಿವೈಎಸ್ಪಿ, ಸಿಐಡಿ(ಬೆಂಗಳೂರು) ಟಿ.ರಂಗಪ್ಪ- ಡಿವೈಎಸ್ಪಿ, ಎಸ್‌ಐಟಿ (ಬೆಂಗಳೂರು) ಟಿ.ಕೋದಂಡರಾಮ-ಡಿವೈಎಸ್ಪಿ, ಎಸಿಬಿ(ಬೆಂಗಳೂರು) ಉಮೇಶ್ ಜಿ.ಶೇಟ್-ಡಿವೈಎಸ್ಪಿ, ಎಸಿಬಿ(ಮೈಸೂರು) ಆರ್.ಎಸ್.ಉಜ್ಜನಕೊಪ್ಪ-ಡಿವೈಎಸ್ಪಿ, ಎಸಿಬಿ(ಕೊಪ್ಪಳ) ಮಂಜುನಾಥ ಕೆ. ಗಂಗಲ್-ಡಿವೈಎಸ್ಪಿ (ದಾವಣಗೆರೆ) ಎಂ.ಬಾಬು-ಡಿವೈಎಸ್ಪಿ, (ದಾವಣಗೆರೆ ನಗರ)

ಸದಾನಂದ ಎ.ತಿಪ್ಪಣ್ಣನವರ್-ಡಿವೈಎಸ್ಪಿ, (ಹಾಸನ) ಸುಧೀರ್ ಎಸ್. ಶೆಟ್ಟಿ-ಇನ್ಸ್‌ಪೆಕ್ಟರ್, ಸಿಐಡಿ (ಬೆಂಗಳೂರು) ಎನ್.ಸೋಮಶೇಖರ್ -ಇನ್ಸ್‌ಪೆಕ್ಟರ್ (ಕೋಲಾರ) ಟಿ.ಎನ್.ನಾಗಭೂಷಣ್-ಎಎಸ್ಸೈ, ಸಿಐಡಿ (ಬೆಂಗಳೂರು) ಸಿ.ಕೋಮಲಾಚಾರ್-ಎಎಸ್ಸೈ, ರಾಣೆಬೆನ್ನೂರು, (ಹಾವೇರಿ)
ಎಚ್.ಎಂ.ಪಾಪಣ್ಣ- ಎಆರ್‌ಎಸ್ಸೈ, ಕೆಎಸ್‌ಆರ್‌ಪಿ (ಬೆಂಗಳೂರು) ಎಸ್.ಸಿದ್ದಲಿಂಗೇಶ್ವರ- ಮುಖ್ಯ ಪೊಲೀಸ್ ಪೇದೆ, ವಿದ್ಯಾರಣ್ಯಪುರ, (ಬೆಂಗಳೂರು) ಎಸ್.ಎಂ.ಬೀಳಗಿ-ಮುಖ್ಯ ಪೊಲೀಸ್ ಪೇದೆ, ಕೆಎಸ್‌ಆರ್‌ಪಿ(ಮೈಸೂರು) ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News