×
Ad

ಕಂದಕಕ್ಕೆ ಉರುಳಿ ಬಿದ್ದ ಬೈಕ್: ಪತ್ನಿ ಸಾವು, ಪತಿಗೆ ಗಂಭೀರ ಗಾಯ

Update: 2018-08-14 22:39 IST

ಮೂಡಿಗೆರೆ, ಆ.14: ದಂಪತಿ ಬೈಕ್‍ ನಲ್ಲಿ ಸಂಚರಿಸುತ್ತಿದ್ದಾಗ, ಭಾರೀ ಮಳೆ ಗಾಳಿ ಹೊಡೆತಕ್ಕೆ ಸಿಕ್ಕಿ ರಸ್ತೆ ಬದಿಯ ಆಳವಾದ ಕಂದಕಕ್ಕೆ ಉರುಳಿಬಿದ್ದು, ಪತ್ನಿ ಸಾವನ್ನಪ್ಪಿದರೆ, ಪತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪಟ್ಟಣದ ಹೊರವಲಯದ ಬಿಳಗುಳ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. 

ಬಿಳಗುಳದ ನಿವಾಸಿ ಖಾಸಿಂ ಎಂಬವರ ಪುತ್ರಿ ಪೌಜಿಯಾ (20) ಹಾಗೂ ಚಿಕ್ಕಮಗಳೂರು ನಗರದ ನಿವಾಸಿ ಇಫ್ರಾನ್ (28) ದಂಪತಿಗಳು ಸೋಮವಾರ ಸಂಜೆ 5 ಗಂಟೆಗೆ ತಮ್ಮ ಬೈಕಿನಲ್ಲಿ ಚಿಕ್ಕಮಗಳೂರಿನಿಂದ ಪತ್ನಿಯ ತವರು ಮನೆ ಬಿಳಗುಳಕ್ಕೆ ಬರುವಾಗ ಭಾರೀ ಮಳೆ, ಗಾಳಿಗೆ ಸಿಲುಕಿ ಬೈಕಿನ ನಿಯಂತ್ರಣ ತಪ್ಪಿದ್ದು, ಕೊಲ್ಲಿಬೈಲ್ ತಿರುವಿನಿಂದ ಕೂಗಳತೆ ದೂರದಲ್ಲಿ ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದಿದ್ದಾರೆ. 

ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು, ಇಫ್ರಾನ್ ಗೆ ಗಂಭೀರ ಗಾಯಗಳಾಗಿದೆ. ಎಂಜಿಎಂ ಆಸ್ಪತ್ರೆಯಲ್ಲಿ ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News