ಯಾದಗಿರಿಯಲ್ಲಿ ಉಲ್ಟಾ ಧ್ವಜಾರೋಹಣ: ಸಚಿವರ ಭಾಷಣವೂ ತಪ್ಪು-ತಪ್ಪು

Update: 2018-08-15 15:20 GMT

ಯಾದಗಿರಿ, ಆ. 15: ಎಪ್ಪತ್ತೆರಡನೆ ಸ್ವಾತಂತ್ರೋತ್ಸವದ ಅಂಗವಾಗಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ ಆರೋಹಣ ಮಾಡಿದ ರಾಷ್ಟ್ರಧ್ವಜ ಉಲ್ಟಾ ಹಾರಾಡಿದ್ದರಿಂದ ಮುಜುಗರಕ್ಕೆ ಸಿಲುಕಿದರು.

ಬುಧವಾರ ಬೆಳಗ್ಗೆ ಸಚಿವ ರಾಜಶೇಖರ್ ಪಾಟೀಲ್ ಧ್ವಜಾರೋಹಣ ನೆರವೇರಿಸುತ್ತಿದ್ದಂತೆ ಕ್ರೀಡಾಂಗಣದಲ್ಲಿ ರಾಷ್ಟಗೀತೆ ಮೊಳಗಿತು. ಆದರೆ, ರಾಷ್ಟ್ರಧ್ವಜ ಉಲ್ಟಾ ಆಗಿರುವುದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಕೂಡಲೇ ಧ್ವಜವನ್ನು ಅವರೋಹಣ ಮಾಡಿ ಸರಿ ಮಾಡಿದರು. ಇದರಿಂದ ಅಧಿಕಾರಿಗಳು ಧ್ವಜನೀತಿ ಸಂಹಿತೆ ಉಲ್ಲಂಘಿಸಿದರು.

ತಪ್ಪು ಭಾಷಣ: ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವ ರಾಜಶೇಖರ ಪಾಟೀಲ, ಜಿಲ್ಲಾಡಳಿತ ಸಿದ್ಧಪಡಿಸಿದ್ದ ಮಾದರಿ ಭಾಷಣವನ್ನು ಓದುವಾಗ ಹಲವು ತಪ್ಪುಗಳನ್ನು ಉಚ್ಛರಿಸುವ ಮೂಲಕ ಸಮಾರಂಭಕ್ಕೆ ಆಭಾಸವನ್ನು ಉಂಟು ಮಾಡಿದರು.

‘ಧ್ವಜ ಆರೋಹಣಕ್ಕೆ ನುರಿತ ಮತ್ತು ವಿಶೇಷ ತರಬೇತಿ ಇರುವ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ. ಆದರೆ, ಅಂತಹ ಸಿಬ್ಬಂದಿ ನಿರ್ಲಕ್ಷ್ಯದಿಂದ ಧ್ವಜವನ್ನು ಉಲ್ಟಾ ಆರೋಹಣ ಮಾಡಬೇಕಾಯಿತು. ಧ್ವಜಾರೋಹಣ ಸಿದ್ಧತೆಯ ಹೊಣೆ ಯಾರದ್ದು? ಈ ಅಚಾತುರ್ಯಕ್ಕೆ ಕಾರಣವೇನು? ಈ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ’

-ರಾಜಶೇಖರ್ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News