ದೇಶವನ್ನು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಸಧೃಢರಾಗಬೇಕು: ಶಾಸಕ ಆರ್.ನರೇಂದ್ರ

Update: 2018-08-15 17:34 GMT

ಕೊಳ್ಳೇಗಾಲ,ಆ.15: ನಮ್ಮ ದೇಶವನ್ನು ಬಲಿಷ್ಟವಾಗಿ ಪ್ರಗತಿಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸಧೃಢರಾಗಬೇಕು ಎಂದು ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ಅವರು ಹೇಳಿದರು.

ಪಟ್ಟಣದ ನ್ಯಾಷನಲ್ ಮೈದಾನದಲ್ಲಿ ಬುಧವಾರ ತಾಲೂಕು ಆಡಳಿತ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇಶ ನನಗೆ ಏನು ಕೊಟ್ಟಿದೆ ಏನ್ನುವುದರ ಬದಲು ನಾವು ದೇಶಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂದು ಮನವರಿಕೆ ಮಾಡಿಕೊಳ್ಳಬೇಕಿದೆ. ಪ್ರತಿಯೊಬ್ಬ ನಾಗರಿಕರರನ್ನೂ ಸಹ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಇನ್ನೂ ಬಲಿಷ್ಟವಾಗಿ ಬೆಳೆಸಬೇಕಾದರೆ ನಾವು ಕರ್ತವ್ಯವನ್ನು ನಿಷ್ಟೆಯಿಂದ, ಪ್ರಾಮಾಣಿಕದಿಂದ ಮಾಡಬೇಕು. ಆಗಮಾತ್ರ ಈ ದೇಶವನ್ನು ಇನ್ನೂ ಹೆಚ್ಚಿನ ಬಲಿಷ್ಟ ರಾಷ್ಟವನ್ನಾಗಿ ಮಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಮೊದಲಿಗೆ ಧ್ವಜರೋಹಣವನ್ನು ಉಪವಿಭಾಗಾಧಿಕಾರಿ ಪೌಜಿಯಾ ತರುನ್ನಮ್‍ರವರು ನೇರವೇರಿಸಿ ನಂತರ ಧ್ವಜವಂದನೆಯನ್ನು ಸ್ವೀಕರಿಸಿದರು. ಮುಖ್ಯ ಭಾಷಣಕಾರರಾಗಿ ಎಸ್‍ವಿಕೆ ಶಾಲೆಯ ಕನ್ನಡ ಶಿಕ್ಷಕರಾದ ಮದ್ದೂರು ದೊರೆಸ್ವಾಮಿರವರು ಭಾಗವಹಿಸಿ ಮಾತನಾಡಿದರು. ನಗರದ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಅಚ್ಚುಕಟ್ಟಾಗಿ ನೇರವೇರಿತು. 

ಇದೇ ಸಂಧರ್ಭದಲ್ಲಿ 2017-18ರಲ್ಲಿ ನಡೆದ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲೇ 5 ಸ್ಥಾನದಲ್ಲಿ ರ್ಯಾಂಕ್ ಪಡೆದು ಜಿಲ್ಲೆಯಲ್ಲೆ ಪ್ರಥಮ ರ್ಯಾಂಕ್ ಗಳಿಸಿದ್ದ ಅರ್ಷಿತಾ ಟಿ.ಎಂ ಳನ್ನು ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿದರು.

ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ರಾಜು, ಉಪಾಧ್ಯಕ್ಷೆ ಲತಾರಾಜಣ್ಣ, ಕಾರ್ಯನಿರ್ವಾಹಣಾಧಿಕಾರಿ ಉಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪಾಟೀಲ್, ಸಂಪನ್ಮೂಲ ಸಮನ್ವಯಾಧಿಕಾರಿ ಮಂಜುಳ, ಡಿವೈಎಸ್‍ಪಿ ಪುಟ್ಟಮಾದಯ್ಯ, ವೃತ್ತ ನಿರೀಕ್ಷಕ ಡಿ.ಜಿ ರಾಜಣ್ಣ, ನಗರಸಭೆ ಪೌರಾಯುಕ್ತ ಕೆ.ಸುರೇಶ್,  ಯೋಜನಾಧಿಕಾರಿ ಪರಶಿವಯ್ಯ, ಸಮಾಜ ಕಲ್ಯಾಣಾಧಿಕಾರಿ ಮಂಜುಳ, ಹಿಂದುಳಿದ ವರ್ಗಗಳ ಇಲಾಖೆ ವಿಸ್ತಾರಣಾಧಿಕಾರಿ ಗುರುಸ್ವಾಮಿ,  ಪರಿಶಿಷ್ಟ ಪಂಗಡ ಇಲಾಖೆ ಗಂಗಾಧರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹದೇವ, ತೋಟಗಾರಿಕೆ ಇಲಾಖೆ ಶಶಿಧರ್, ದೈಹಿಕ ಶಿಕ್ಷಕ ಉಮಾಶಂಕರ್, ಬಿಆರ್‍ಸಿ ಶಾಂತರಾಜು ಸೇರಿದಂತೆ ಇನ್ನಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News