ವಿದ್ಯಾರ್ಥಿಗಳು ದೇಶಾಭಿಮಾನ ಬೆಳಸಿಕೊಳ್ಳಿ: ಪತ್ರಕರ್ತ ಎಸ್.ಎಂ. ಪಟೇಲ್

Update: 2018-08-15 17:39 GMT

ಗಂಗಾವತಿ,ಆ.15: ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿ ನಮಗೆ ಸ್ವಾತಂತ್ರ ಕೊಡಿಸಿ, ಗುಲಾಮಗಿರಿಯ ಬದುಕನ್ನು ಹಸನ್ಮುಖಿಯನ್ನಾಗಿ ಮಾಡಿದ್ದಾರೆ. ಆದ್ದರಿಂದ ಸ್ವಾತಂತ್ರ ಹೋರಾಟಗಾರರನ್ನು ಪ್ರತಿದಿನವೂ ನೆನೆಯುವುದರ ಮೂಲಕ ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕೆಂದು ಸುವರ್ಣಗಿರಿ ಪತ್ರಿಕೆ ಸಂಪಾದಕ, ವಾರ್ತಾಭಾರತಿ ಜಿಲ್ಲಾ ವರದಿಗಾರ ಎಸ್.ಎಂ. ಪಟೇಲ್ ಹೇಳಿದರು.

ನಗರದ ಕಸಾಪ ಭವನದಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಅಲೂಕ ಘಟಕದಿಂದ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲೆ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ಮುಂದಿನ ಭವ್ಯಭಾರತದ ಪ್ರಜೆಗಳು. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ರಾಷ್ಟ್ರಗೀತೆ, ಸಂವಿಧಾನ, ಸ್ವಾತಂತ್ರ ಹೋರಾಟಗಾರರನ್ನು ಸದಾ ಸ್ಮರಿಸಿ ಗೌರವಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾವಳಿಯಿಂದ ವಿದ್ಯಾರ್ಥಿಗಳು ಸೇಲ್ಫಿ ಗೀಳಿಗೆ ಬಲಿಯಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ಬೆಳೆಯುವ ಮನೋಭಾವನೆಯನ್ನು ರೂಢಿಸಿಕೊಳ್ಳಬೇಕಿದೆ. ಉತ್ತಮ ವಿದ್ಯಾಭ್ಯಾಸ ಮಾಡುವುದರೊಂದಿಗೆ ತಂದೆ ತಾಯಿಗೆ, ಶಿಕ್ಷಕರಿಗೆ ಮತ್ತು ಶಾಲೆಗೆ ಕೀರ್ತಿ ತರಬೇಕು. ಇಂತಹ ಸಾಂಸ್ಕೃತಿಕ, ಕ್ರೀಡೆ ಇನ್ನಿತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಹೇಳಿದರು. ನಂತರ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದರಿಗೆ ಪ್ರಮಾಣಪತ್ರ ನೀಡಲಾಯಿತು.

ಅಂಗವಿಕಲರ ಸಂಘದ ತಾಲೂಕಾಧ್ಯಕ್ಷ ಅಶೋಕ ಗುಡಿಕೋಟಿ ಪ್ರಾಸ್ತವಿಕ ಮಾತನಾಡಿದರು. ನೀನಾಸಂ ಪದವೀಧರ ಎಂ. ಪರಶುರಾಮಪ್ರಿಯ, ಪಿ. ದಶರಥ, ಮಲಕೇಶ ಗುಡಿಕೋಟಿ, ಅಂಗವಿಕಲರ ಸಂಘದ ಕಾರ್ಯಕರ್ತರು, ವಿದ್ಯಾರ್ಥಿಗಳು ಪಾಲಕರು ಭಾಗವಹಿಸಿದ್ದರು. ಯಲ್ಲಪ್ಪ ಕಲಾಲ್ ನಿರೂಪಣೆ ಮಾಡಿದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News