ಮಂಡ್ಯ: ಸ್ವಾತಂತ್ರೋತ್ಸವದ ಪ್ರಯುಕ್ತ 500 ಅಡಿ ತಿರಂಗ ಪ್ರದರ್ಶನ

Update: 2018-08-15 17:57 GMT

ಮಂಡ್ಯ, ಆ.15: 72ನೇ ಸ್ವಾತಂತ್ರ ದಿನಾಚರಣೆ ಅಂಗವಾಗಿ ಮಂಡ್ಯ ಯೂತ್ ಗ್ರೂಪ್ ವತಿಯಿಂದ 500 ಅಡಿ ಉದ್ದದ ತಿರಂಗವನ್ನು ಪ್ರದರ್ಶಿಸಲಾಯಿತು. ಸ್ವಾತಂತ್ರದ ಬೆಳಕನ್ನು ಸಂಕೇತಿಸುವ 72 ಪಂಜುಗಳೊಂದಿಗೆ ಗ್ರೂಪ್‍ನ ನೂರಾರು ಸದಸ್ಯರು, ನರ್ಸಿಂಗ್ ಕಾಲೇಜು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉದ್ದನೆಯ ಧ್ವಜ ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

ಡಾ.ಯಾಶಿಕಾ ಅನಿಲ್ ಅವರು ರಾಷ್ಟ್ರಧ್ವಜ ಹಿಡಿದು ಮುನ್ನಡೆದರೆ, 72 ಅಂಕಿಯನ್ನು ಬಿಂಬಿಸುವ ಮಾದರಿಯಲ್ಲಿ ವಿದ್ಯಾರ್ಥಿಗಳು ಪಂಜು ಹಿಡಿದರು. ಅವರ ಹಿಂದೆ 500 ಅಡಿ ಉದ್ದದ ಧ್ವಜ ಹಿಡಿದ ಯೂತ್ ಗ್ರೂಪ್‍ನ ಸದಸ್ಯರು ಸಾಗಿಬಂದರು. ವಂದೇಮಾತರಂ ಗೀತೆಯನ್ನು ಪ್ರಮುಖ ಬೀದಿಗಳಲ್ಲಿ ಮೊಳಗಿಸುತ್ತಾ ಮೆರವಣಿಗೆಯಲ್ಲಿ ಮುನ್ನಡೆದರು.

ಹೊಸಹಳ್ಳಿ ವೃತ್ತದಿಂದ ಹೊರಟ ತಿರಂಗ ಪ್ರದರ್ಶನದ ಮೆರವಣಿಗೆ ಜಿಲ್ಲಾಸ್ಪತ್ರೆ ರಸ್ತೆ ಮೂಲಕ ಸಾಗಿ ಬೆಂಗಳೂರು-ಮೈಸೂರು ಹೆದ್ದಾರಿ ತಲುಪಿತು. ಅಲ್ಲಿಂದ ವಿಶ್ವೇಶ್ವರಯ್ಯ ರಸ್ತೆ ಮೂಲಕ ನೂರಡಿ ರಸ್ತೆ ತಲುಪಿ ಹೊಸಹಳ್ಳಿಯ ಬಿಸಿಲು ಮಾರಮ್ಮ ದೇವಸ್ಥಾನದ ಬಳಿ ಅಂತ್ಯಗೊಂಡಿತು. 

ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್, ಉಪಾಧ್ಯಕ್ಷ ಎ.ಎಸ್.ಮಂಜು, ರುದ್ರಪ್ಪ, ವಿನಯ್, ದರ್ಶನ್, ರಾಜಣ್ಣ, ಮಲ್ಲೇಶ್, ನಾಗೇಶ್, ದೇವಿ, ಪ್ರಮೋದ್, ಪ್ರವೀಣ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News