ಸ್ವಾತಂತ್ರೋತ್ಸವದಲ್ಲಿ ಭಾಗವಹಿಸಲು ಸಾರ್ವಜನಿಕರ ಆಸಡ್ಡೆ: ಶಾಸಕರ ಸುಬ್ಬಾರೆಡ್ಡಿ ಬೇಸರ

Update: 2018-08-15 18:23 GMT

ಬಾಗೇಪಲ್ಲಿ,ಆ.15: ಹೊಸ ವರ್ಷದ ಜನವರಿ 1ರಂದು ಆಚರಣೆ ಮಾಡಲು 15 ದಿನ ಮುಂಚೆಯೇ ಸಿದ್ಧತೆ ಮಾಡಿಕೊಂಡು ಮದ್ಯರಾತ್ರಿ 12 ಗಂಟೆ ವೇಳೆ ಕೇಕೆ ಹಾಕಿ ಪಟಾಕಿ ಸಿಡಿಸುತ್ತೇವೆ. ಆದರೆ ಮಹಾತ್ಮರ ತ್ಯಾಗ ಬಲಿದಾನಗಳಿಂದ ಸಂಪಾದನೆ ಮಾಡಿದ ಸ್ವಾತಂತ್ರೋತ್ಸವ ಆಚರಣೆ ಮಾಡಲು ಜನರಿಗೆ ಅರಿವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬೇಸರ ವ್ಯಕ್ತಪಡಿಸಿದರು.

ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಪಟ್ಟಣದ ಬಾಲಕಿಯರ ಶಾಲಾ ಸಂಕಿರ್ಣದಲ್ಲಿ ಏರ್ಪಡಿಸಿದ್ದ 72ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಶಿಕ್ಷಕರು ಬಿಟ್ಟರೆ ಸಾರ್ವಜನಿಕರು ಭಾಗವಹಿಸದಿರುವುದು ವಿಷಾಧನೀಯ. ವಿದ್ಯಾರ್ಥಿ,ವಿದ್ಯಾರ್ಥಿನಿಯರು ಸ್ವಾತಂತ್ರೋತ್ಸವ ಕಾರ್ಯಕ್ರಮನ್ನು ಆದ್ದೂರಿಯಿಂದ ಆಚರಣೆ ಮಾಡಲು ಮುಂದೆ ಬರಬೇಕಾಗಿದೆ ಎಂದರು.

ತಹಶೀಲ್ದಾರ್ ಮಹಮದ್ ಅಸ್ಲಂ ಧ್ವಜಾರೋಹಣ ನೆರವೇರಿಸಿದರು. ಶಾಲಾ ಮಕ್ಕಳಿಂದ ನೃತ್ಯರೂಪಕ,ದೇಶ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಆರೋಗ್ಯ ಇಲಾಖೆ ಬಿ.ಕೆ.ಸುಮಿತ್ರ, ಪುರಸಭೆ ಅಧ್ಯಕ್ಷೆ ಮಮತ ನಾಗರಾಜ ರೆಡ್ಡಿ, ಮುಖ್ಯಾಧಿಕಾರಿ ಎಚ್.ಸಿ.ಹನುಮಂತೇಗೌಡ, ನಿವೃತ್ತ ಯೋಧ ವೆಂಕಟರವಣ, ರೇಷ್ಮೆ ಇಲಾಖೆಯ ಅಮರನಾಥ್, ಶಿಕ್ಷಣ ಇಲಾಖೆ ಡಿ ಗ್ರೂಪ್ ನೌಕರ ಗಂಗಪ್ಪ ಅವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಅರುಣಾ ಅಮರನಾಥರೆಡ್ಡಿ, ನಾರಾಯಣಮ್ಮ, ನರಸಿಂಹಪ್ಪ, ಬ್ಲಾಕ್ ಕಾಂಗ್ರೆಸ್ ಎಚ್.ಎಸ್.ನರೇಂದ್ರ, ತಾಪಂ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಉಪಾಧ್ಯಕ್ಷೆ ಸರಸ್ವತಮ್ಮ, ಇಒ ಕೆ.ವಿ.ರೆಡ್ಡಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಶಿವಕುಮಾರ್, ತಾಲೂಕು ವೈದ್ಯಾಧಿಕಾರಿ ಸಿ.ಎನ್.ಸತ್ಯನಾರಾಯಣರೆಡ್ಡಿ, ಪುರಸಭೆ ಸದಸ್ಯ ಅ.ನಾ.ಮೂರ್ತಿ, ನಲ್ಲಪ್ಪ, ಚೆನ್ನಮ್ಮ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ, ತಾಲೂಕು ಶಿಕ್ಷಣ ಇಲಾಖೆಯ ಸಂಯೋಜಕ ಬೈರೆಡ್ಡಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವಿ.ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News