ವಾಜಪೇಯಿ ನಿಧನ: ಶಾಸಕ ಕುಮಾರಸ್ವಾಮಿ, ವಿ.ಪ ಸದಸ್ಯ ಎಂ.ಕೆ.ಪ್ರಾಣೇಶ್‍ ಸಂತಾಪ

Update: 2018-08-16 17:25 GMT

ಮೂಡಿಗೆರೆ,ಆ.16: ಭಾರತೀಯ ಜನಾತಾ ಪಕ್ಷದ ಬೆಳವಣಿಗೆಗೆ ಕಾರಣವಾದ ಧೀಮಂತ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಿಧನಕ್ಕೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮತ್ತು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಅವರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ, ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ವಿಶ್ವಗುರುವನ್ನಾಗಿಸಲು ವಾಜಪೇಯಿಯವರ ಆರು ವರ್ಷದ ಆಡಳಿತ ಹಾಗೂ ಸಂಸತ್‍ನಲ್ಲಿ ಇವರ ಸೇವೆ ಶತಮಾನಗಳು ಕಳೆದರೂ ದೇಶ ಮತ್ತು ಜನತೆ ನೆನಪಿನಲ್ಲಿ ಇಟ್ಟುಕೊಳ್ಳುವಂತಹದಾಗಿದ್ದು ಪ್ರಮುಖವಾಗಿ ಪೋಕಾನ್ ಅಣು ಸ್ಪೋಟ, ನದಿ ಜೋಡಣೆ ಯೋಜನೆ, ಗ್ರಾಮ್ ಸಡಕ್, ಭಾರತ್ ಜೋಡೋ ಚತುಸ್ಪಥ ಯೋಜನೆ ಮುಂತಾದ ದ್ಯೇಯೋದ್ದೇಶ ಹಾಗೂ ಕಾರ್ಯವೈಕರಿ ಮತ್ತು ದೃಡ ಸಂಕಲ್ಪ ಮುಂದಿನ ಪೀಳಿಗೆಗೆ ಅನುಕರಣಿಯವಾಗಿದೆ ಎಂದು ತಿಳಿಸಿದರು.

ಪಕ್ಷದ ಕಚೇರಿಯಲ್ಲಿ ಸಂತಾಪ ಸಭೆ
ವಾಜಪೇಯಿ ನಿಧನದ ಹಿನ್ನೆಲೆಯಲ್ಲಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪಕ್ಷದ ದ್ವಜವನ್ನು ಅರ್ದಕ್ಕೆ ಇಳಿಸುವ ಮೂಲಕ ಸಂತಾಪ ಸಭೆ ನೆರವೇರಿಸಲಾಯಿತು ಈ ಸಂದರ್ಭ ವಾಜಪೇಯಿ ಅವರ ಜೀವನ ಪಕ್ಷವನ್ನು ಕಟ್ಟಿದ ರೀತಿ ಮತ್ತು ಭಾರತವನ್ನು ಪ್ರಧಾನಿಯಾಗಿ ಮುನ್ನಡೆಸಿದ ಪರಿ ಇವುಗಳನ್ನು ಸ್ಮರಿಸಲಾಯಿತು.

ಸಭೆಯಲ್ಲಿ ಮಂಡಲಾಧ್ಯಕ್ಷ ಪ್ರಮೋದ್ ದುಂಡುಗ, ರಘು ಜನ್ನಾಪುರ, ಜಯಂತ್ ಬಿದರಳ್ಳಿ, ವಿನೋದ್ ಕಣಚೂರು, ಲತಾಲಕ್ಷ್ಮಣ್, ಸರೋಜ ಸುರೇಂದ್ರ, ನಯನ ತಳವಾರ, ಪ್ರಶಾತ್ ಬಿಳುಗುಳ, ಪೂರ್ಣಿಮ ಮಲ್ಯ, ಪಟೇಲ್ ಮಂಜು, ಆದರ್ಶ ತರುವೆ, ಹರೀಶ್, ಸುಶೀಲ, ಸಂಜಯ್ ಕೊಟ್ಟಿಗೆಹಾರ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News